ಕೊಲ್ಲೂರು: ದಿನಾಂಕ:22-11-2024 (ಹಾಯ್ ಉಡುಪಿ ನ್ಯೂಸ್) ಉದಯ ನಗರದ ಸಾರ್ವಜನಿಕ ಸ್ಥಳದಲ್ಲಿ ಶರಾಬು ಸೇವನೆ ಮಾಡುತ್ತಿದ್ದ ವ್ಯಕ್ತಿಯನ್ನು ಕೊಲ್ಲೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುಧಾರಾಣಿ ಟಿ ಅವರು ಬಂಧಿಸಿದ್ದಾರೆ.
ಕೊಲ್ಲೂರು ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಸುಧಾರಾಣಿ ಟಿ ಅವರು ಪೊಲೀಸ್ ಜೀಪಿನಲ್ಲಿ ಜೀಪು ಚಾಲಕರಾದ ರವಿಚಂದ್ರ, ಹಾಗೂ ಠಾಣೆಯ ಸಿಬ್ಬಂದಿ ನರಸಿಂಹರೊಂದಿಗೆ, ಮುದೂರು ಗ್ರಾಮದಲ್ಲಿ ರೌಂಡ್ಸ್‌ನಲ್ಲಿರುವಾಗ, ಠಾಣೆಯ ಬೀಟ್ ಕರ್ತವ್ಯದ ಸಿಬ್ಬಂದಿ ಪುನೀತ್ ರವರು ನೀಡಿದ ಮಾಹಿತಿ ಮೇರೆಗೆ, ಬೈಂದೂರು ಮುದೂರು ಗ್ರಾಮದ ಉದಯನಗರ ಅಂಬೇಡ್ಕರ್ ಭವನದ ಬಳಿಯ ಸಾರ್ವಜನಿಕ ಸ್ಥಳಕ್ಕೆ ದಾಳಿ ಮಾಡಿದಾಗ, ಆಪಾದಿತ ಸುರೇಶ (30) ಮೂದುರು ಗ್ರಾಮ, ಬೈಂದೂರು ನಿವಾಸಿ ಎಂಬವನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಶರಾಬು ಸೇವನೆ ಮಾಡಿರುತ್ತಾನೆ ಎಂದು ದೂರು ದಾಖಲಿಸಿದ್ದಾರೆ.
ಆರೋಪಿಯ ವಶದಿಂದ ಮೈಸೂರು ಲ್ಯಾನ್ಸರ್ ಎಂದು ಬರೆದಿರುವ 180 ml ನ ಸ್ಯಾಚೆಟ್ -2, BLACK FORT ಎಂದು ಬರೆದ 500 ML ನ ಖಾಲಿ ಬೀಯರ್ ಟಿನ್ -1 , ನೀರಿನ ಪ್ಲಾಸ್ಟಿಕ್ ಬಾಟಲಿ-1 ಮತ್ತು ಪ್ಲಾಸ್ಟಿಕ್ ಲೋಟ -1ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ:15 (ಎ) ಕರ್ನಾಟಕ ಅಬಕಾರಿ ಕಾಯ್ಡೆಯಂತೆ ಪ್ರಕರಣ ದಾಖಲಾಗಿರುತ್ತದೆ.