Spread the love

ಪರ್ಕಳ: ದಿನಾಂಕ:20-11-2024(ಹಾಯ್ ಉಡುಪಿ ನ್ಯೂಸ್)

ಕೆಳ ಪರ್ಕಳದ ರಸ್ತೆ ದುರವಸ್ಥೆಯ ಬಗ್ಗೆ ಹಾಯ್ ಉಡುಪಿ ಮಾಧ್ಯಮದಲ್ಲಿ ದಿನಾಂಕ 13-11-2024 ರ ವರದಿಯಲ್ಲಿ ಕೂಡಲೇ ರಸ್ತೆ ದುರಸ್ತಿ ನಡೆಸದಿದ್ದಲ್ಲಿ ಜನಪ್ರತಿನಿಧಿಗಳು ವಿಶಿಷ್ಟ ಪ್ರತಿಭಟನೆಯನ್ನು ಮುಂದೆ ಎದುರಿಸ ಬೇಕಾದೀತು ಎಂದು ಎಚ್ಚರಿಕೆ ನೀಡಲಾಗಿತ್ತು.

ಈ ಎಚ್ಚರಿಕೆಯಿಂದ ಜಾಗ್ರತರಾದ ಜನಪ್ರತಿನಿಧಿಗಳು, ಅಧಿಕಾರಿಗಳು, ಗುತ್ತಿಗೆದಾರರು ಕೂಡಲೇ ರಸ್ತೆ ದುರಸ್ತಿ ನಡೆಸಲು ಕ್ರಮಕೈಗೊಂಡಿದ್ದಾರೆ. ಇಂದು ಕೆಳಪರ್ಕಳದಿಂದ ಮಣಿಪಾಲ ಕಾಂಕ್ರೀಟ್ ರಸ್ತೆ ವರೆಗೆ ಡಾಮರೀಕರಣ ನಡೆದಿದೆ.

ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೂಡ ಆದಷ್ಟು ಶೀಘ್ರ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಜನಪ್ರತಿನಿಧಿಗಳು ಮುತುವರ್ಜಿ ಯಿಂದ ಕ್ರಮಕೈಗೊಳ್ಳಬೇಕಾಗಿದೆ.

error: No Copying!