ಹೆಬ್ರಿ: ದಿನಾಂಕ 19/11/2024 (ಹಾಯ್ ಉಡುಪಿ ನ್ಯೂಸ್) ದೂಪದಕಟ್ಟೆ ಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ನಡೆಯುತ್ತಿದ್ದಲ್ಲಿಗೆ ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹೇಶ.ಟಿ.ಎಮ್ ಅವರು ದಾಳಿ ನಡೆಸಿದ್ದಾರೆ.
ಹೆಬ್ರಿ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ಕಾ.ಸು) ಮಹೇಶ ಟಿ.ಎಮ್ ಅವರು ದಿನಾಂಕ : 18-11-2024 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೇಳಂಜೆ ಗ್ರಾಮದ ದೂಪದಕಟ್ಟೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ಜುಗಾರಿ ನಡೆಸುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕ ರಿಂದ ಬಂದ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಪೊಲೀಸರು ದಾಳಿ ಮಾಡಿದಾಗ ಅಲ್ಲಿದ್ದ ಜನರು ಓಡಿ ಹೋಗಿರುತ್ತಾರೆ ಎನ್ನಲಾಗಿದೆ .ಅವರನ್ನು ಕಿಶನ್, ಸುನೀಲ, ರಾಘವೇಂದ್ರ, ರಾಜೇಶ, ಕಿರ್ತನ್ ,ಮತ್ತು ರಂಜಿತ್ ಎಂಬುದಾಗಿ ಗುರುತಿಸಿರುತ್ತಾರೆ ಹಣವನ್ನು ಪಣವಾಗಿಟ್ಟುಕೊಂಡು ಕೋಳಿಗಳಿಗೆ ಆಹಾರ ನೀರು ನೀಡದೆ ಹಿಂಸಾತ್ಮಕ ರೀತಿಯಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ಆರೋಪಿತರುಗಳ ವಿರುದ್ದ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕಲಂ: 87, 93 KP ACT & 11(1)(n) Prevention of cruelty animals act ರಂತೆ ಪ್ರಕರಣ ದಾಖಲಾಗಿದೆ.