ಶಂಕರನಾರಾಯಣ: ದಿನಾಂಕ:19-11-2024 ( ಹಾಯ್ ಉಡುಪಿ ನ್ಯೂಸ್) ಗ್ರಾಮದ ಸರಕಾರಿ ಹಾಡಿಯಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಏಳು ಜನರನ್ನು ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ಅವರು ಬಂಧಿಸಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ಅವರಿಗೆ ದಿನಾಂಕ 18/11/2024 ರಂದು ಶಂಕರನಾರಾಯಣ ಗ್ರಾಮದ ಸದಾಶಿವ ರವರ ಜಾಗದ ಕಡೆಗೆ ಹೋಗುವ ಮಣ್ಣುರಸ್ತೆಯ ಪಕ್ಕದಲ್ಲಿರುವ ಸರಕಾರಿ ಹಾಡಿಯಲ್ಲಿ ಅಕ್ರಮವಾಗಿ ಗುಂಪು ಗೂಡಿಕೊಂಡು ಇಸ್ಪೀಟ್ ಎಲೆಗಳಿಂದ ಹಣವನ್ನು ಪಣವಾಗಿರಿಸಿ ಅಂದರ್ ಬಾಹರ್ ಜುಗಾರಿ ಆಟ ಅಡುತ್ತಿರುವುದಾಗಿ ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿ ಅಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರೋಪಿತರಾದ 1. ವಿಜಯ ಕುಮಾರ, 2.ಮಂಜುನಾಥ, 3.ಸಂತೋಷ, 4.ಹರೀಶ, 5. ಜೋಗು, 6.ರಮಾನಂದ, 7. ಸಂದೇಶ ಎಂಬವರನ್ನು ಬಂಧಿಸಿದ್ದಾರೆ.
ಆರೋಪಿಗಳು ಜುಗಾರಿ ಆಟದ ಬಗ್ಗೆ ಉಪಯೋಗ ಮಾಡಿದ ನಗದು ಹಣ 9810/- ರೂಪಾಯಿ ನೆಲದ ಮೇಲೆ ಹಾಸಿದ ಹಳೆಯ ನ್ಯೂಸ್ ಪೇಪರ್, ಇಸ್ಫೀಟ್ ಎಲೆಗಳು ಹಾಗೂ ಮೊಬೈಲ್ ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.