Spread the love

ಉಡುಪಿ: ದಿನಾಂಕ:  17/11/2024 (ಹಾಯ್ ಉಡುಪಿ ನ್ಯೂಸ್) ಬ್ರಹ್ಮಾವರ ಕೆ.ಜಿ.ರೋಡ್ ಪರಿಸರದಲ್ಲಿ ಗಾಂಜಾ ಹೊಂದಿದ್ದ ಮೂವರು ಯುವಕರನ್ನು ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ಅವರು ಬಂಧಿಸಿದ್ದಾರೆ.

ಸೆನ್ ಅಪರಾಧ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ಅವರಿಗೆ ದಿನಾಂಕ :15-11-2024 ರಂದು ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ K.G. ರೋಡ್‌ ಕ್ರಾಸ್‌ ಬಳಿಯಲ್ಲಿ ಹಾದು ಹೋಗಿರುವ N.H. 66 ರ ಪೂರ್ವ ದಿಕ್ಕಿನಲ್ಲಿರುವ ಸರ್ವಿಸ್‌ ರಸ್ತೆಯಲ್ಲಿ ಸತ್ಯರಾಜ್‌ ಯಾನೆ ತಂಬಿ ಅಣ್ಣ ಎಂಬಾತನು ವ್ಯಕ್ತಿಗಳಿಬ್ಬರ ಮೂಲಕ ಮುಂಬಯಿ ಯಿಂದ ತರಿಸಿಕೊಂಡಿರುವ ಮಾದಕವಸ್ತು ಗಾಂಜಾವನ್ನು ಅವರಿಂದ ಪಡೆಯಲು ಸ್ಥಳಕ್ಕೆ ಬರುತ್ತಿದ್ದಾನೆ ಎಂಬ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿದ್ದಾರೆ .

ಸ್ಥಳದಲ್ಲಿ ಇದ್ದ ಸತ್ಯರಾಜ್‌ ಯಾನೆ ತಂಬಿ ಅಣ್ಣ , ಕೃಷ್ಣ ಯಾನೆ ಕೃಷ್ಣ , ಶಕಿಲೇಶ್‌ ಎಂಬವರನ್ನು ಬಂಧಿಸಿ ಅವರಿಂದ ಯಾವುದೇ ಪರವಾನಿಗೆ ಇಲ್ಲದೇ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 10 ಕಿಲೋ 138 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದು, ಆಪಾದಿತರು ಬಳಸಿದ್ದ ಮೊಬೈಲ್ ಪೋನ್-3, ಅಂ ಬ್ಯಾಗ್-2 , ನಗದು ರೂಪಾಯಿ 1570/- ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಮುಂಬಯಿ ನಿವಾಸಿ ಶಿವು ಯಾನೆ ಬಾಬಾ ಎಂಬಾತನಿಂದ ಗಾಂಜಾ ಖರೀದಿಸಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ  ಕಲಂ: 8(c), 20 (b) (ii), (B) NDPS Act ರಂತೆ ಪ್ರಕರಣ ದಾಖಲಾಗಿದೆ.

error: No Copying!