ಮಲ್ಪೆ: ದಿನಾಂಕ 13/11/2024(ಹಾಯ್ ಉಡುಪಿ ನ್ಯೂಸ್) ವಡಬಾಂಡೇಶ್ವರ ರಸ್ತೆಯಲ್ಲಿ ಮರಳು ಕಳ್ಳ ಸಾಗಣೆ ಮಾಡುತ್ತಿದ್ದ 407 ವಾಹನವನ್ನು ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್ ಅವರು ಬಂಧಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣೆ , ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್ ಅವರು ದಿನಾಂಕ:12-11-2024 ರಂದು ರೌಂಡ್ಸ್ ಕರ್ತವ್ಯದಲ್ಲಿ ಉಡುಪಿ ತಾಲೂಕು ಕೊಡವೂರು ಗ್ರಾಮದ ವಡಾಬಾಂಡೇಶ್ವರ ಉಪೇಂದ್ರ ಸರ್ಕಲ್‌ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಮಲ್ಪೆ ಜಂಕ್ಷನ್‌ಕಡೆಯಿಂದ ಬೀಚ್ ಕಡೆಗೆ ಆರೋಪಿ ಬಸವರಾಜ್ ಎಂಬವ KA-20-AA-8575 ನೇ ಟಾಟಾ 407 ವಾಹನದಲ್ಲಿ ಅಕ್ರಮವಾಗಿ ಮರಳನ್ನು ವಾಹನದಲ್ಲಿ ತುಂಬಿಸಿಕೊಂಡು ಬಂದು ಉಪೇಂದ್ರ ಸರ್ಕಲ್ ಬಳಿ ಪೊಲೀಸರನ್ನು ಕಂಡು ಮಲ್ಪೆ ಹೋಟೇಲ್ ಎದುರು ವಾಹನ ಬಿಟ್ಟು ಓಡಿ ಹೋಗಿದ್ದು, ಆರೋಪಿ ಚಾಲಕನು ಮರಳನ್ನು ಯಾವುದೋ ಸ್ಥಳದಿಂದ ಕಳವು ಮಾಡಿಕೊಂಡು, ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿ ಪೊಲೀಸ್ ತನಿಖೆ ಯಲ್ಲಿ ತಿಳಿದು ಬಂದಿದೆ ಎನ್ನಲಾಗಿದೆ.
ವಾಹನದಲ್ಲಿ 1 ಯುನಿಟ್‌ನಷ್ಟು ಮರಳು ಇದ್ದು, ಮರಳು ತುಂಬಿರುವ ವಾಹನವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ:303(2) BNS, ಕಲಂ:4, 4ಎ, 21 ಎಮ್ಎಮ್ ಆರ್ಡಿ ಕಾಯಿದೆ ಯಂತೆ ಪ್ರಕರಣ ದಾಖಲಾಗಿದೆ.