ಪರ್ಕಳ: ದಿನಾಂಕ:13-11-2024(ಹಾಯ್ ಉಡುಪಿ ನ್ಯೂಸ್)
ಜನರತಾಳ್ಮೆಯ ಕಟ್ಟೆ ಒಡೆದಿದ್ದು ಈ ಕೂಡಲೇ ಪರ್ಕಳ ಕೆಳ ರಸ್ತೆಯ ಜನರ ಪ್ರಾಣಕ್ಕೆ ಕಂಟಕವಾಗಿರುವ ರಸ್ತೆ ಹೊಂಡಗಳನ್ನು ಈ ಕೂಡಲೇ ಮುಚ್ಚಿ ತುರ್ತು ಕಾಮಗಾರಿ ನಡೆಸದಿದ್ದಲ್ಲಿ ಜನಪ್ರತಿನಿಧಿಗಳು ಆಕ್ರೋಶ ಗೊಂಡಿರುವ ಜನರ ವಿಶಿಷ್ಟ ಪ್ರತಿಭಟನೆ ಯನ್ನು ಎದುರಿಸ ಬೇಕಾದೀತು ಎಂದು ಸಾರ್ವಜನಿಕ ವಲಯದಲ್ಲಿ ಸುದ್ದಿಯಾಗಿದೆ.
ಮಣಿಪಾಲ ಮಾರ್ಗವಾಗಿ ಪರ್ಕಳ ಸಂಪರ್ಕಿಸುವಾಗ ಕೆಳಪರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ವಿಳಂಬ ದಿಂದಾಗಿ ಹಳೆಯ ರಸ್ತೆಯಲ್ಲಿ ಉಂಟಾಗಿರುವ ಬ್ರಹತ್ ಮರಣ ಗುಂಡಿಗಳಿಂದಾಗಿ ಅದೆಷ್ಟೋ ವಾಹನಸವಾರರು ಜಖಂಗೊಂಡು ಆಸ್ಪತ್ರೆ ಗಳಲ್ಲಿ ರೋಗಿಗಳಾಗಿದ್ದಾರೆ. ಪ್ರಾಣ ಕಳೆದುಕೊಂಡವರು ಅದೆಷ್ಟೋ? ಇಲ್ಲಿ ದಿನನಿತ್ಯ ಅಪಘಾತ ಸಂಭವಿಸುತ್ತಿದೆ. ರಸ್ತೆ ತುಂಬಿ ಕೊಂಡಿರುವ ಬ್ರಹತ್ ಹೊಂಡಗಳನ್ನು ತಪ್ಪಿಸಿ ವಾಹನ ಸವಾರಿ ನಡೆಸುವುದೇ ಜೀವ ಪಣಕ್ಕಿಟ್ಟು ಸಂಚರಿಸುವಂತೆ ಆಗಿದೆ.
ಇಷ್ಟೆಲ್ಲಾ ಅವಾಂತರಗಳು ನಡೆಯುತ್ತಿದ್ದರೂ ಕಣ್ಣಿದ್ದರೂ ಕುರುಡರಂತೆ ವರ್ತಿಸುತ್ತಿರುವ ನಮ್ಮ ಜನಪ್ರತಿನಿಧಿಗಳಿಗೆ ಉಡುಪಿ ಭಾಷೆಯಲ್ಲಿ ಹೇಳಿದರೆ,ಬೈದರೆ ಸಾಕಾಗುತ್ತಿಲ್ಲ? ಈ ಜನಪ್ರತಿನಿಧಿಗಳಿಗೆ ಉತ್ತರ ಕರ್ನಾಟಕದ ಭಾಷೆಯಲ್ಲಿ ಬೈಯಬೇಕೋ ಏನೋ ? ಈಗಾಗಲೇ ಜನರು ರೊಚ್ಚಿಗೆದ್ದು ಇವರ ಮುಖಕ್ಕೆ ಉಗಿಯಲು ಸಜ್ಜಾಗಿದ್ದಾರೆ.
ಮಳೆ ಮುಗಿದು ಬಿಸಿಲು ಸುಡುತ್ತಿದ್ದರೂ ಕನಿಷ್ಟ ತೇಪೆ ಕಾರ್ಯ ವನ್ನೂ ನಡೆಸದೆ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರನ ದರ್ಪಕ್ಕೆ ಜನ ಉತ್ತರ ಕೊಡಲು ಸಜ್ಜಾಗಿದ್ದಾರೆ.
ಉಡುಪಿ ಜಿಲ್ಲೆಯ ಎಲ್ಲಾ ಶಾಸಕರು,ಸಂಸದರ ಜನಪ್ರತಿನಿಧಿಗಳ ಭಾವಚಿತ್ರ ಗಳನ್ನೊಳಗೊಂಡ ಬ್ಯಾನರನ್ನು ಈ ರಸ್ತೆಯ ಬದಿಯಲ್ಲಿ ನೆಟ್ಟುನೆಲ್ಲಿಸಿ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರೆಲ್ಲರೂ ಆ ಬ್ಯಾನರ್ ನಲ್ಲಿರುವ ಭಾವಚಿತ್ರ ಗಳಿಗೆ ಕ್ಯಾಕರಿಸಿ ಉಗಿದು ಕೊಂಡು ಹೋಗುವ ವಿಶಿಷ್ಟ ಪ್ರತಿಭಟನೆ ಗೆ ಜನ ಸಿದ್ಧರಾಗಿದ್ದು ಉಗಿಸಿಕೊಳ್ಳಲು ಜನಪ್ರತಿನಿಧಿಗಳು ಸಿಧ್ಧರಾಗಬೇಕಾಗಿದೆ.
ಜಿಲ್ಲೆಯ ಪ್ರಭಾವಿ ರಾಜಕಾರಣಿಗಳೆಂದು ಕೊಂಡಿರುವ ಪ್ರಭಾವಿ ಜನಪ್ರತಿನಿಧಿಗಳು ತಮಗೆ ಧಮ್ ಇದ್ದರೆ ಈ ಕೂಡಲೆ ಮಣಿಪಾಲದ ಕಾಂಕ್ರೀಟ್ ರಸ್ತೆ ಯಿಂದ ಪರ್ಕಳ ದವರೆಗೆ ಈ ಕೂಡಲೇ ಡಾಮರೀಕರಣ ಮಾಡಿ ತಮ್ಮ ಯೋಗ್ಯತೆ ಯನ್ನು ಪ್ರದರ್ಶಿಸಬೇಕಾಗಿದೆ.