Spread the love

ಬ್ರಹ್ಮಾವರ:ದಿನಾಂಕ 08.11.2024 (ಹಾಯ್ ಉಡುಪಿ ನ್ಯೂಸ್) ಸೀತಾ ನದಿ ಹೊಳೆ ಯಿಂದ ಮರಳು ಕಳ್ಳತನ ನಡೆಸಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಾವರ ಪೊಲೀಸ್‌ ಠಾಣೆ ಮಹಿಳಾ ಹೆಡ್ ಕಾನ್ಸ್ಟೇಬಲ್ ಕವಿತಾ ಅವರಿಗೆ ದಿನಾಂಕ :08-11-2024 ರಂದು ಕುಮ್ರಗೋಡು ಗ್ರಾಮದ ವಾಂಟಿಕಳಿ ಎಂಬಲ್ಲಿರುವ ಸೀತಾನದಿ ಹೊಳೆಯಿಂದ ಅನಧಿಕೃತವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ರಿಂದ ದೊರೆತ ಖಚಿತ ಮಾಹಿತಿ ಮೇರೆಗೆ ಅವರು ಠಾಣೆಯ ಇತರ ಸಿಬ್ದಂದಿಯವರನ್ನು ಕರೆದುಕೊಂಡು ಮಧ್ಯಾಹ್ನ  ಹಂದಾಡಿ ಗ್ರಾಮದ ಬೆಣ್ಣೆಕುದ್ರು ಗ್ಲೋಬಲ್‌ ಕ್ವಾರಿ ಇಂಡಸ್ಟ್ರಿಯ ಸ್ವಲ್ಪ ಮುಂದೆ ಹೋಗುವಾಗ ಅವರ ಮುಂದಿನಿಂದ ಬರುತ್ತಿದ್ದ KA20D8738 ನೇ TATA ACE ವಾಹನವನ್ನು ನಿಲ್ಲಿಸಿ ಪರಿಶೀಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆ ವಾಹನದಲ್ಲಿ  ಆರೋಪಿ 1 ನೇ ಪ್ರಶಾಂತ ಹಾಗೂ 2ನೇ ಶಶಿಧರ ಎಂಬವರು ಯಾವುದೇ ಪರವಾನಿಗೆ ಇಲ್ಲದೇ ಆ ವಾಹನದಲ್ಲಿ ಸುಮಾರು 50 ಬುಟ್ಟಿ ಮರಳು, ಬಕೇಟ್‌-2, ಚಾವಲ್‌ -1, ಹಾರೆ-1 ನ್ನು ಸಾಗಿಸುತ್ತಿರುವುದು ಕಂಡು ಬಂದಿದ್ದು, ಆರೋಪಿಗಳು ಸ್ವಂತ ಲಾಭಕ್ಕೋಸ್ಕರ ಸೀತಾನದಿ ಹೊಳೆಯಿಂದ   ಯಾವುದೇ ಪರವಾನಿಗೆ ಹೊಂದದೇ ಅನಧೀಕೃತವಾಗಿ ಕಳ್ಳತನ ಮಾಡಿ ಮರಳನ್ನು  ಸಾಗಾಟ ಮಾಡುತ್ತಿದ್ದರು ಎಂದು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 4(1-a), 21(4) MMDR Act ಹಾಗೂ ಕಲಂ:  303(2) BNS  ನಂತೆ ಪ್ರಕರಣ ದಾಖಲಾಗಿದೆ.

error: No Copying!