Spread the love

ಮಣಿಪಾಲ: ದಿನಾಂಕ: 01-11-2024(ಹಾಯ್ ಉಡುಪಿ ನ್ಯೂಸ್) ಮನೆ ಕೆಲಸದವಳು ಇನ್ನೋರ್ವ ವ್ಯಕ್ತಿ ಯೊಂದಿಗೆ ಸೇರಿಕೊಂಡು ಮನೆ ಮಾಲಕಿಗೆ ಐ.ಟಿ. ಅಧಿಕಾರಿ ಎಂದು ನಂಬಿಸಿ 7.5 ಲಕ್ಷ ನಗದು ಹಾಗೂ 3 ಲಕ್ಷ ಮೌಲ್ಯದ ಚಿನ್ನಾಭರಣ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಳ್ಳಿ ಗ್ರಾಮದ ಪೆರಂಪಳ್ಳಿ ರಸ್ತೆ ನಿವಾಸಿ ಶ್ರೀಮತಿ ಜ್ಯೂಲಿಯಟ್ (44) ಎಂಬವರು ಸುಮಾರು 04 ತಿಂಗಳಿನಿಂದ ಪೆರಂಪಳ್ಳಿಯ ಸುನೀತಾ ಎಂಬವಳನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಶ್ರೀಮತಿ ಜ್ಯೂಲಿಯಟ್ ಅವರು ಸುನೀತಾ ಳಲ್ಲಿ  ಜ್ಯೂಲಿಯಟ್ ರವರ ಹಾಗೂ ಅವರ ಗಂಡನ ನಡುವೆ ಇದ್ದ ಮನಸ್ತಾಪದ ಬಗ್ಗೆ ಹೇಳಿಕೊಂಡಿದ್ದು ಸುನೀತಾ ರವರು ಜ್ಯೂಲಿಯಟ್ ರವರಲ್ಲಿ ಅವರ ಗಂಡನಿಗೆ ವಿಚ್ಚೇದನ ಕೊಡುವಂತೆ ಹೇಳುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸುನೀತಾಳ ಮಾತುಗಳಿಂದ ಬೇಸರಗೊಂಡು ಮನೆ ಬಿಟ್ಟು ಹೋಗಲು ನಿರ್ಧರಿಸಿ ಅವರ ತಾಯಿಯನ್ನು ಮನೆಗೆ ಬರಲು ಹೇಳಿ ದಿನಾಂಕ: 28/10/2024 ರಂದು ಅವರ ತಾಯಿಯಲ್ಲಿ ಬಟ್ಟೆಬರೆ ಹಾಗೂ ಸ್ವಲ್ಪ ಚಿನ್ನವನ್ನು ಹಾಗೂ ಗಂಡನ ಮನೆಯ ಲಾಕರ್‌ ನಲ್ಲಿ ಇರಿಸಿದ್ದ 10 ಲಕ್ಷ ರೂಪಾಯಿಯಲ್ಲಿ 1 ಲಕ್ಷ ಹಣವನ್ನು ಕೊಟ್ಟು ಕಳುಹಿಸಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನಂತರ ದಿನಾಂಕ: 29/10/2024 ರಂದು ಬೆಳಿಗ್ಗೆ  ಸುನೀತಾ ಳು  ಸ್ಟ್ಯಾನಿ ಎಂಬವನೊಂದಿಗೆ ಜ್ಯೂಲಿಯಟ್ ಅವರ  ಮನೆಗೆ ಬಂದು ಐ,ಟಿ ಅಧಿಕಾರಿಗಳು ಬಂದಿದ್ದಾರೆ ನಿಮ್ಮ ಮನೆಗೆ ರೈಡ್‌ ಮಾಡುತ್ತಾರೆ ಲಾಕರ್‌ ನಲ್ಲಿ ಇದ್ದ ಹಣ ಹಾಗೂ ಒಡವೆಯನ್ನು ತೆಗೆಯಬೇಕು ಎಂದು ಹೇಳಿ  ಜ್ಯೂಲಿಯಟ್ ಅವರಿಂದ ಲಾಕರ್‌ ಕೀ ತೆಗೆದುಕೊಂಡು ಲಾಕರ್‌ ಓಪನ್‌ ಮಾಡಿ ಅದರಲ್ಲಿ ಇದ್ದ ಹಣದಲ್ಲಿ ಒಂದು ಲಕ್ಷ 50 ಸಾವಿರ ರೂಪಾಯಿಯನ್ನು  ಜ್ಯೂಲಿಯಟ್ ರವರ ಬ್ಯಾಗ್‌ ಗೆ ಹಾಕಿ ಉಳಿದ 7 ಲಕ್ಷ 50 ಸಾವಿರ ರೂಪಾಯಿ ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್‌ ನೆಕ್ಲೆಸ್‌ ನ್ನು ಅವಳ ಚೀಲದಲ್ಲಿ ಹಾಕಿಕೊಂಡು ನನ್ನಲ್ಲಿ ಇರಲಿ ಆ ನಂತರ ಕೊಡುತ್ತೇನೆ ಎಂದು ಹೇಳಿದ್ದಾಳೆ ಎಂದೂ ಸುನೀತಾ ಹಾಗೂ ಸ್ಟ್ಯಾನಿ ಇವರುಗಳು ಐ,ಟಿ ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು  ಜ್ಯೂಲಿಯಟ್ ರನ್ನು ನಂಬಿಸಿ 7 ಲಕ್ಷ 50 ಸಾವಿರ ರೂಪಾಯಿ ನಗದು ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್‌ ಸರವನ್ನು ತೆಗೆದುಕೊಂಡು ಮೋಸಮಾಡಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ  ಕಲಂ: 316(7) 318(4) R/w 3(5) ಬಿಎನ್ಎಸ್‌ ರಂತೆ ಪ್ರಕರಣ ದಾಖಲಾಗಿದೆ.

error: No Copying!