ಮಣಿಪಾಲ: ದಿನಾಂಕ: 01.11.2024 ( ಹಾಯ್ ಉಡುಪಿ ನ್ಯೂಸ್) ಪರ್ಕಳ ಜಂಕ್ಷನ್ ನ ಅಂಗಡಿಯೊಂದರಲ್ಲಿ ಅಕ್ರಮ ಪಟಾಕಿಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂಬ ದೂರಿನ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಕ್ಷಯ ಕುಮಾರಿ ಎಸ್,ಎನ್ ಅವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಅಕ್ಷಯ ಕುಮಾರಿ ಎಸ್.ಎನ್ ಅವರು ದಿನಾಂಕ: 31-10-2024 ರಂದು ಠಾಣಾ ಸರಹದ್ದಿನ ಪರ್ಕಳ ಪರಿಸರದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಪರ್ಕಳ ಜಂಕ್ಷನ್‌ನಲ್ಲಿರುವ ಪ್ರಕಾಶ್ ಸ್ಟೋರ್ಸ್ ಎಂಬ ಅಂಗಡಿಯಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಸುಡುಮದ್ದುಗಳನ್ನು (ಪಟಾಕಿಗಳನ್ನು) ಸಂಗ್ರಹಿಸಿಟ್ಟಿರುತ್ತಾರೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಠಾಣೆಯ ಸಿಬ್ಬಂದಿ ಯವರೊಂದಿಗೆ ಮತ್ತು ಜಿಲ್ಲಾ ಸೋಕೋ ಅಧಿಕಾರಿಯವರೊಂದಿಗೆ ದಾಳಿ ನಡೆಸಿ ಆರೋಫಿ ಪ್ರಕಾಶ್ ಡಿ ಎಂಬವನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .
ಆತನ ಸಂಗ್ರಹದಲ್ಲಿದ್ದ ಸುಮಾರು 42397/- ರೂ ಮೌಲ್ಯದ ವಿವಿಧ ಪಟಾಕಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 9B(1) (b) Explosive Act 1984 ಮತ್ತು ಕಲಂ 218 ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿದೆ.