Spread the love

ಹೆಬ್ರಿ: ದಿನಾಂಕ : 27/10/2024 (ಹಾಯ್ ಉಡುಪಿ ನ್ಯೂಸ್) ಮುದ್ರಾಡಿ  ರಸ್ತೆ ಮೂಲಕ ಮರಳು ಕಳ್ಳ ಸಾಗಾಣಿಕೆ ನಡೆಸುತ್ತಿದ್ದ ಲಾರಿ ಚಾಲಕನನ್ನು ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹಾಂತೇಶ ಜಾಬಗೌಡ ಆವರು ಬಂಧಿಸಿದ್ದಾರೆ.

ಹೆಬ್ರಿ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಮಹಾಂತೇಶ ಜಾಬಗೌಡ ಅವರಿಗೆ ದಿನಾಂಕ:26-10-2024 ರಂದು ಬಂದ ಖಚಿತ ಮಾಹಿತಿಯ ಮೇರೆಗೆ ಮುದ್ರಾಡಿ-ಬಲ್ಲಾಡಿ ರಸ್ತೆಯ ರಾಮನಾಥ ಗೇರು ಬೀಜ ಪ್ಯಾಕ್ಟರಿ ಹತ್ತಿರ ಮದ್ಯಾಹ್ನ ಸಮಯ ವಾಹನ ತಪಾಸಣೆ ಮಾಡುತ್ತಿರುವಾಗ ಅನುಮಾನದ ಮೇರೆಗೆ ಲಾರಿಯೊಂದನ್ನು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ ಎನ್ನಲಾಗಿದೆ.

ಲಾರಿ ಚಾಲಕ ಆರೋಪಿ ಪ್ರಭಾಕರ ಎಂಬವ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಶಿವಪುರ ಗ್ರಾಮದ ಸೂರೆಮಣ್ಣು ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆದು ಕಳವು ಮಾಡಿ ಯಾವುದೇ ಪರವಾನಿಗೆಯನ್ನು ಪಡೆಯದೇ ಸ್ವಂತ ಲಾಭದ ಉದ್ದೇಶದಿಂದ ಅಕ್ರಮವಾಗಿ KA-20-AB-0720 ನೇ EICHER ಲಾರಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಪೋಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ  ಕಲಂ: 303(2)BNS ಮತ್ತು 4(1A),21(4) MMRD ACT ರಂತೆ ಪ್ರಕರಣ ದಾಖಲಾಗಿದೆ.

error: No Copying!