Spread the love
  • ಉಡುಪಿ: ದಿನಾಂಕ 27/10/2024(ಹಾಯ್ ಉಡುಪಿ ನ್ಯೂಸ್) ಪೆರಂಪಳ್ಳಿ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಯೋರ್ವನನ್ನು ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ  ರಾಮ ಚಂದ್ರ ನಾಯಕ್ ಅವರು ಬಂಧಿಸಿದ್ದಾರೆ.
  • ಸೆನ್ ಅಪರಾಧ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ಅವರಿಗೆ ದಿನಾಂಕ:26-10-2024 ರಂದು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಪೆರಂಪಳ್ಳಿ ಎಂಬಲ್ಲಿರುವ ಸಾಯಿರಾಧಾ ಟೌನ್‌ಶಿಪ್‌ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಅಬ್ದುಲ್‌ ಜಬ್ಬಾರ್‌ ಯಾನೆ ಜಬ್ಬಾರ್‌ ಎಂಬಾತನು ಸ್ಕೂಟರ್‌ ನಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಬೆನ್ನಿಗೆ ಹಾಕುವ ಚೀಲದಲ್ಲಿ ಮಾರಾಟ ಮಾಡಲು ನಿಂತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೂಡಲೇ ದಾಳಿ ನಡೆಸಿ ಅಬ್ದುಲ್‌ಜಬ್ಬಾರ್‌ ಯಾನೆ ಜಬ್ಬಾರ್‌ ಎಂಬಾತನನ್ನು  ಬಂಧಿಸಿದ್ದಾರೆ .
  • ಬಂಧಿತ ಜಬ್ಬಾರ್ ನಿಂದ ಯಾವುದೇ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 2 ಕಿಲೋ, 344 ಗ್ರಾಂ ತೂಕದ ಗಾಂಜಾ, ಮೊಬೈಲ್ ಪೋನ್, , ಗಾಂಜಾವನ್ನು ಸಾಗಾಟ ಮಾಡಲು ಬಳಸಿದ್ದ ಬ್ಯಾಗ್, ಪ್ಲಾಸ್ಟಿಕ್‌ ಕವರ್‌, ವೆಯಿಂಗ್‌ ಮಿಶನ್‌, ಚೂರಿ, ನಗದು ರೂಪಾಯಿ 5810/- ಮತ್ತು ಗಾಂಜಾ ಸಾಗಾಟಕ್ಕೆ ಬಳಸಿರುವ APRILIA ಕಂಪೆನಿಯ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ.
  •  ಆರೋಪಿ  ಜಬ್ಬಾರ್ ನು ಅಕ್ರಮ್‌ ಭಟ್ಕಳ  ಎಂಬಾತನಿಂದ ಗಾಂಜಾ ಖರೀದಿಸಿರುವ ಬಗ್ಗೆ ತನಿಖೆ ಯಲ್ಲಿ ತಿಳಿಸಿರುತ್ತಾನೆ ಎನ್ನಲಾಗಿದೆ.
  • ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ  ಕಲಂ: 8(c), 20 (b) (ii), (B) NDPS Act ರಂತೆ ಪ್ರಕರಣ ದಾಖಲಾಗಿದೆ.
error: No Copying!