ಕಾರ್ಕಳ: ದಿನಾಂಕ: 15-10-2024( ಹಾಯ್ ಉಡುಪಿ ನ್ಯೂಸ್) ಫೈನಾನ್ಸ್ ಸಂಸ್ಥೆಯಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಮ್ಯಾನೇಜರ್ ಓರ್ವನು ಸಂಸ್ಥೆಗೆ ಎರಡು ಲಕ್ಷ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ
ಕಾರ್ಕಳ ಕಸಬಾ ಗ್ರಾಮದ ನಿವಾಸಿ ತಿರಕಪ್ಪ ಎಂಬವರು ಕಾರ್ಕಳ ತಾಲೂಕಿನ ಅನಂತ ಶಯನ ಬಳಿ ಇರುವ ಸ್ವಂದನಾ ಸ್ಪೂರ್ತಿ ಫೈನ್ಸಾನ್ಸ್ ಕ್ಲಸ್ಟರ್ ನ ಮ್ಯಾನೇಜರ್ ಆಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ,
ಈ ಸಂಸ್ಥೆ ಯಲ್ಲಿ ಈ ಹಿಂದೆ ಮ್ಯಾನೇಜರ್ ಆಗಿದ್ದ ಆರೋಪಿ ಓಂಕಾರ ಎಂಬವನು ದಿನಾಂಕ 29/08/2024 ರಿಂದ 03/09/2024 ರ ಅವಧಿಯಲ್ಲಿ ಸಂಸ್ಥೆಗೆ ಸಂಬಂಧಿಸಿದ ರೂಪಾಯಿ 1,97,013/- ರೂಪಾಯಿ ಹಣವನ್ನು ಸಂಸ್ಥೆಯ ಖಾತೆಗೆ ಜಮಾ ಮಾಡದೇ ಸ್ವಂತಕ್ಕೆ ಬಳಸಿಕೊಂಡು ಸಂಸ್ಥೆಗೆ ನಂಬಿಕೆ ದ್ರೋಹ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 316(4) BNS ನಂತೆ ಪ್ರಕರಣ ದಾಖಲಾಗಿದೆ.