Spread the love

ಕುಂದಾಪುರ : ದಿನಾಂಕ:15-10-2024(ಹಾಯ್ ಉಡುಪಿ ನ್ಯೂಸ್)

ಕುಂದಾಪುರದ ಸಾರ್ವಜನಿಕರಿಂದ  ಮಹಾಸತಿ ಬಿಲ್ಡರ್ಸ್ ಕುಂದಾಪುರ ಇದರ ಶೇಷಯ್ಯ ಕೊತ್ವಾಲ್ ಎಂಬವರ ವಿರುದ್ಧ ಹಲವಾರು ದೂರುಗಳು  ವಿವಿಧ ಇಲಾಖೆಗಳಿಗೆ ನೀಡಲಾಗಿದ್ದು ಇವರಿಂದ ಹಲವಾರು ಕಾನೂನು ಉಲ್ಲಂಘನೆ, ಕೊಲೆ ಬೆದರಿಕೆ, ಅಕ್ರಮ ಭೂ ಕಬಳಿಕೆ, ಇವರಿಗೆ  ಸಂಬಂಧ ಪಟ್ಟ ಲಾಡ್ಜ್ ನಲ್ಲಿ ವೈಶ್ಯಾವಾಟಿಕೆ, ಇವರ ಬಿಲ್ಡಿಂಗ್ ನ ಕೊಳಚೆ ನೀರು ಚರಂಡಿಗೆ ಬಿಟ್ಟು ಸಾರ್ವಜನಿಕರಿಗೆ ತೊಂದರೆ, ಕೆಲಸ ಮಾಡುವ ಮಹಿಳೆಯರ ಜೊತೆಗೆ ಅನುಚಿತ ವರ್ತನೆ, ಇವರ ರೆಸಾರ್ಟ್ ನಲ್ಲಿ ಅನುಮಾನಾಸ್ಪದ ಸಾವು, ಹೀಗೆ ಹಲವಾರು ದೂರುಗಳು ಇವೆ.

ಕುಂದಾಪುರದ ಹೃದಯ ಭಾಗದಲ್ಲಿರುವ ಪೊಲೀಸ್ ಠಾಣೆಗೆ ಹತ್ತಿರದಲ್ಲಿರುವ ವೆಂಕಟರಮಣ ಆರ್ಕೇಡ್ ವಾಣಿಜ್ಯ ಸಂಕೀರ್ಣದ ಮತ್ತು 5ನೇ ಫ್ಲೋರ್ ನಲ್ಲಿರುವ ಲಾಡ್ಜ್ ನ ಕೊಳಚೆ ನೀರನ್ನು ಮೋರಿಗೆ ಬಿಟ್ಟು ಸುತ್ತಮುತ್ತಲಿನ ಸಾರ್ವಜನಿಕರು ದುರ್ನಾಥ ದಲ್ಲಿ  ಡೆಂಗ್ಯೂ, ಮಲೇರಿಯಾ ಭಯದಿಂದ ಬದುಕುವಂತಾಗಿದ್ದು ಈ ಬಗ್ಗೆ ಪುರಸಭೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಕುಂದಾಪುರದ ಸಾರ್ವಜನಿಕರು ಲಾಡ್ಜ್ ನ ಐದನೇ ಫ್ಲೋರಿನಲ್ಲಿ  ವೈಶ್ಯಾವಾಟಿಕೆ ನಡೆಯುತ್ತಿದೆ ಎಂದು  ಹಲವಾರು ಬಾರಿ ದೂರು ನೀಡಿದರು ಸಹ ಪೊಲೀಸ್ ಇಲಾಖೆ ಯಾವುದೇ ರೀತಿಯ ಕ್ರಮ  ಕೈಗೊಂಡಿಲ್ಲ ಎನ್ನಲಾಗಿದೆ.

ಇತ್ತೀಚೆಗೆ ತ್ರಾಸಿ ಬಳಿಯಲ್ಲಿ CRZ ವ್ಯಾಪ್ತಿಗೆ ಬರುವ ಜಾಗದಲ್ಲಿ ಸಭಾಂಗಣ ಕಟ್ಟುತಿದ್ದು ಸಾರ್ವಜನಿಕರು ಹೇಳುವಂತೆ ಇಲ್ಲಿ ಎರಡು ಅನುಮಾನಾಸ್ಪದ ಸಾವು ನಡೆದಿದೆ  ಮತ್ತು ಇಲ್ಲಿ ಭೂಕಬಳಿಕೆ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಎಲ್ಲಾ ಸಾರ್ವಜನಿಕ ದೂರುಗಳ ಬಗ್ಗೆ ತನಿಖಾ ವರದಿ ಸಂಗ್ರಹಿಸುತ್ತಿದ್ದ ಕುಂದಾಪುರದ ವರದಿಗಾರ ಕಿರಣ್ ರವರಿಗೆ ಆರೋಪಿ ಶೇಷಯ್ಯ ಕೋತ್ವಾಲ ಬೆದರಿಕೆ ಹಾಕಿದ್ದಾನೆ ಹಾಗೂ ನಿನ್ನನ್ನು ನೋಡಿಕೊಳ್ಳುತ್ತೇನೆ ನಿನ್ನ ಮೇಲೆಯೇ ಕೇಸು ದಾಖಲಿಸುವ ಕೆಪ್ಯಾಸಿಟಿ ನನಗಿದೆ ನಾನು ಯಾರು ಎಂದು ತೋರಿಸುತ್ತೇನೆ ಎಂದು ಹಣದ ದರ್ಪದಿಂದ ಬೆದರಿಕೆ ಹಾಕಿದ್ದಾನೆ ಎಂದು ತನಿಖಾ ಪತ್ರಕರ್ತ ಕಿರಣ್ ದೂರು ನೀಡಿದ್ದಾರೆ.

ಶೇಷಯ್ಯ ಕೋತ್ವಾಲ ನ ಅಕ್ರಮ ವ್ಯವಹಾರ ಗಳ ಮಾಹಿತಿ ಪಡೆದು ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು  ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿಗಳಿಗೆ, ಕುಂದಾಪುರ DYSP, ಕುಂದಾಪುರ ಠಾಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.

error: No Copying!