Spread the love

ಕಾರ್ಕಳ: ದಿನಾಂಕ : 13-10-2024 (ಹಾಯ್ ಉಡುಪಿ ನ್ಯೂಸ್) ಮೂಲ್ಕಿಯ ಉಳೆಯಪಾಡಿ ಎಂಬಲ್ಲಿಂದ ಮರಳು ಕಳ್ಳ ತನ ನಡೆಸಿ ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಚಾಲಕನನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 12/10/2024 ರಂದು ಬೆಳಿಗ್ಗೆ ಮುಂಡ್ಕೂರು ಗ್ರಾಮದ ವಿಧ್ಯಾವರ್ದಕ ಕಾಲೇಜು ಬಳಿ ಜಾರಿಗೆಕಟ್ಟೆ ಕಡೆಯಿಂದ ಮುಂಡ್ಕೂರು ಕಡೆಗೆ ಆರೋಪಿ ಚಾಲಕ ಅಜಯ್‌ ಎಂಬವನು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಆರೋಪಿ ಅಜಯ್ ನ ಮಾಲಕನಾದ ಮುಂಡ್ಕೂರು ಮಹಾಬಲ ಎಂಬವ  ತಿಳಿಸಿದಂತೆ ಮುಲ್ಕಿ ತಾಲೂಕು ಉಳೆಯಪಾಡಿ ಎಂಬಲ್ಲಿಂದ 2 ½ ಯುನಿಟ್ ಮರಳನ್ನು ಕಳ್ಳತನ ಮಾಡಿ ಜಾರಿಗೆಕಟ್ಟೆ ಕಡೆಯಿಂದ ಮುಂಡ್ಕೂರು ಕಡೆಗೆ ಟಿಪ್ಪರ್ ಲಾರಿ ನಂಬ್ರ KA-20-B-8845 ನೇಯದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವಾಗ ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಲಂ:303(2) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆ 2023 ಮತ್ತು U/s. 66 R/d 192(A) IMV ACT ಕಲಂ: 4(1-A), 21(4) Mines and Minerals Regulation Act 1957 ರಂತೆ ಪ್ರಕರಣ ದಾಖಲಾಗಿದೆ.

error: No Copying!