Spread the love

ಕಾರ್ಕಳ: ದಿನಾಂಕ: 13-10-2024 (ಹಾಯ್ ಉಡುಪಿ ನ್ಯೂಸ್)  ಕಸಬಾ ಗ್ರಾಮದ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ಹಾಕಿಸಿಕೊಂಡ ಕಾರು ಮಾಲಕನೋರ್ವ ಹಣ ನೀಡದೆ ಪರಾರಿ ಆಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರ್ಕಳ ಮಿಯ್ಯಾರು ಗ್ರಾಮದ ನಿವಾಸಿ ರೋಹಿತ್ ಕುಮಾರ್ ( 42) ಎಂಬವರು ಕಾರ್ಕಳ ತಾಲೂಕಿನ ಕಸಬಾ ಗ್ರಾಮದಲ್ಲಿ ANU FUEL M R P L ಪೆಟ್ರೋಲ್‌ ಬಂಕ್ ವ್ಯವಹಾರ ಮಾಡಿಕೊಂಡಿದ್ದು, ದಿನಾಂಕ 29/08/2024 ರಂದು ಬೆಳಗಿನ ಜಾವ 2:50 ಗಂಟೆಗೆ ಆರೋಪಿ ಕಾರು ಚಾಲಕ KA-20-ME-8212 ನೇ ನಂಬ್ರದ ಮಹೇಂದ್ರ XUV 300 ನೇ ಕಾರಿಗೆ ಪೆಟ್ರೋಲ್‌ ಹಾಕಿಸಿಕೊಳ್ಳಲು ಬಂದಿದ್ದು ರೂಪಾಯಿ 4253.88/- ರೂಪಾಯಿ ಪೆಟ್ರೋಲ್‌ ಹಾಕಿಸಿಕೊಂಡ ಬಳಿಕ ಪೆಟ್ರೋಲ್ ಹಾಕಿಸಿದ ಪೆಟ್ರೋಲ್ ಬಂಕ್ ನೌಕರ ಆಕಾಶ್ ಇವರಲ್ಲಿ UPI ಸ್ಕ್ಯಾನರ್‌ ತರುವಂತೆ ಹೇಳಿದ್ದು ಅವರು UPI ಸ್ಕ್ಯಾನರ್‌ ಅನ್ನು ತರಲು ಹೋದಾಗ ಆರೋಪಿಯು ಕಾರನ್ನು ಚಲಾಯಿಸಿಕೊಂಡು  ಹೋಗಿ ಪೆಟ್ರೋಲ್ ಹಾಕಿದ ರೂಪಾಯಿ 4253.88/ ರೂಪಾಯಿ ಹಣವನ್ನು ನೀಡದೇ ಮೋಸ ಮಾಡಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 318(4) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!