Spread the love

ಮುಂಬೈ: ದಿನಾಂಕ : 10-10-2024 ( ಹಾಯ್ ಉಡುಪಿ ನ್ಯೂಸ್)

ವಿಶ್ವದ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿ ಖ್ಯಾತಿ ಪಡೆದಿರುವ ವಾರ್ಷಿಕ 165 ಮಿಲಿಯನ್ ಡಾಲರ್ ವರಮಾನ ಹೊಂದಿರುವ ಟಾಟಾ ಸಮೂಹ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದೇಶದ ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಬುಧವಾರ ರಾತ್ರಿ ಇಲ್ಲಿ ನಿಧನರಾದರು, ಅವರಿಗೆ 86 ವರ್ಷ ವಯಸ್ಸಾಗಿತ್ತು.

ಟಾಟಾ ಸಮೂಹ ಸಂಸ್ಥೆಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಅವರು ಕಳೆದ ಕೆಲವು ದಿನಗಳಿಂದ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು , ರಕ್ತದ ಒತ್ತಡ ಕಡಿಮೆ ಆದ ಕಾರಣ ರತನ್ ಟಾಟಾ ಅವರನ್ನು ಅಕ್ಟೋಬರ್ 7 ರ ಮುಂಜಾನೆ ಮುಂಬೈ ನ ಬ್ರೀಜ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರತನ್ ಟಾಟಾ ಅವರು ಆಸ್ಪತ್ರೆಗೆ ದಾಖಲು ಆಗುತ್ತಿದ್ದಂತೆ ಅವರ ಆರೋಗ್ಯದ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳು ಹರಿದಾಡ ತೊಡಗಿದ್ದವು.

ಈ ಬಗ್ಗೆ ರತನ್ ಟಾಟಾ ಅವರು ಅದೇ ದಿನ ಎಕ್ಸ್/ಟ್ವಿಟರ್ ನಲ್ಲಿ ಪೋಸ್ಟ್ ಹಂಚಿ ಕೊಂಡು ನಾನು ಆರೋಗ್ಯ ವಾಗಿದ್ದೇನೆ ಎಂದು ಸ್ವತಃ ಸ್ಪಷ್ಟನೆ ನೀಡಿದ್ದರು.

ಬುಧವಾರ ಬೆಳಗ್ಗೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಅವರನ್ನು  ಬ್ರೀಜ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಸುಮಾರು 11.30 ಘಂಟೆಗೆ ಅವರು ಮ್ರತಪಟ್ಟರು.

‘ರತನ್ ಟಾಟಾ ಅವರು ಇನ್ನಿಲ್ಲ ‘ಎಂದು ಟಾಟಾ ಸನ್ಸ್ ಸಂಸ್ಥೆ ಯ ಅಧ್ಯಕ್ಷ ಎನ್.ಚಂದ್ರಶೇಖರನ್ ಅವರು ಹೇಳಿಕೆ ಬಿಡುಗಡೆ ಮಾಡುವ ಮೂಲಕ ದೇಶದ ಉದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದಿದ್ದ ರತನ್ ಟಾಟಾ ಎಂಬ ಚೇತನ ನಂದಿ ಹೋಯಿತು.

ರತನ್ ಟಾಟಾ ಅವರ ಅಗಲಿಕೆಗೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಉದ್ಯಮ ಕ್ಷೇತ್ರದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

error: No Copying!