Spread the love

ಬ್ರಹ್ಮಾವರ: ದಿನಾಂಕ : 09/10/2024 (ಹಾಯ್ ಉಡುಪಿ ನ್ಯೂಸ್) ಹಾವಂಜೆ ಗ್ರಾಮದ ಹಾಡಿ ಯೊಂದರಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಬ್ರಹ್ಮಾವರ ಪೊಲೀಸ್‌ ಠಾಣೆಯ  ಪೊಲೀಸ್ ಉಪ ನಿರೀಕ್ಷಕರಾದ ( ಕಾ.&ಸು.) ಮಧು ಸಿ.ಇ ಅವರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಮಧು ಬಿ.ಇ ಅವರು ದಿನಾಂಕ: 08-10-2024 ರಂದು ಬ್ರಹ್ಮಾವರ ತಾಲೂಕು, ಹಾವಂಜೆ ಗ್ರಾಮದ ಬೆಳ್ಮಾರು ರಸ್ತೆಯ ಅರ್.ಜೆ. ಕಾಂಪ್ಲೆಕ್ಸ್ ಹಿಂಭಾಗದ ಹಾಡಿಯಲ್ಲಿ ಹಣವನ್ನು ಪಣವಾಗಿಟ್ಟು ಕೋಳಿಗಳ ಕಾಲಿಗೆ ಹರಿತವಾದ ಕೋಳಿ ಬಾಲ್‌ ( ಕತ್ತಿ) ಯನ್ನು ಕಟ್ಟಿ ಕೋಳಿ ಅಂಕ ಜುಗಾರಿ ಆಟ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಕೂಡಲೇ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ದಾಳಿ ನಡೆಸಿದಾಗ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದ ಆರೋಪಿಗಳು ಓಡಿ ಹೋಗಿದ್ದು, ಓಡಿ ಹೋಗುತ್ತಿದ್ದವರ ಪೈಕಿ ಗುರುಪ್ರಸಾದ್,ವಿಜಯ, ಗಣೇಶ್ ಎಂಬವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸಂತೋಷ ಎಂಬಾತನು ಜುಗಾರಿ ಆಟ ನಡೆಸುತ್ತಿದ್ದ ಬಗ್ಗೆ ಹಾಗೂ ಪರಿಚಯವಿಲ್ಲದ ಇತರರು ಓಡಿ ಹೋಗಿರುವ ಬಗ್ಗೆ ಪೊಲೀಸರಿಗೆ ತಿಳಿಸಿರುತ್ತಾನೆ . ಓಡಿ ಹೋದ ಆರೋಪಿಗಳು ಕೋಳಿ ಜುಗಾರಿ ಆಟಕ್ಕೆ ಬಳಸಿದ್ದ ಸ್ಥಳದಲ್ಲಿದ್ದ 2 ಕೋಳಿಗಳನ್ನು, 2 ಕೋಳಿ ಬಾಲ್ ಗಳನ್ನು ಹಾಗೂ ಕೋಳಿ ಅಂಕ ಜುಗಾರಿ ಆಟವಾಡಲು ಬಂದಿದ್ದ ಆರೋಪಿಗಳು ಬಿಟ್ಟು ಹೋಗಿದ್ದ ಸ್ಥಳದಲ್ಲಿದ್ದ 5 ಸ್ಕೂಟರ್ ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 87 93 ಕೆ.ಪಿ. ಆಕ್ಟ್‌ ಮತ್ತು 11 Prevention of cruelty of animal act ರಂತೆ ಪ್ರಕರಣ ದಾಖಲಾಗಿದೆ.

error: No Copying!