ದಿನಾಂಕ : 8 /10/2024 (ಹಾಯ್ ಉಡುಪಿ ನ್ಯೂಸ್)
ಕರವೇ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಅವರು 60% ಕನ್ನಡ ನಾಮಫಲಕ ಕಡ್ಡಾಯದ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ನಗರ ಸಭೆಯ ಪೌರಾಯುಕ್ತರನ್ನು ಭೇಟಿ ಮಾಡಿ ಮನವಿ ನೀಡಿದರು.
ಮುಂದಿನ ದಿನಗಳಲ್ಲಿ ಈ ಮನವಿಗೆ ಸಂಬಂಧಿಸಿದಂತೆ ಯಾವುದೇ ಒಂದು ಕ್ರಮ ಕೈಗೊಳ್ಳದೆ ಇದ್ದಲ್ಲಿ ಅತೀ ಶೀಘ್ರದಲ್ಲಿ ನಗರ ಸಭೆಗೆ ಮುತ್ತಿಗೆ ಹಾಕಲಾಗುವುದು ಹಾಗೂ ಬಹು ದೊಡ್ಡ ಮಟ್ಟದ ಪ್ರತಿಭಟನೆಯನ್ನು ಮಾಡಲಿದ್ದೇವೆ ಎಂದು ಕರವೇ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಅವರು ನಗರಸಭೆಯ ಪೌರಾಯುಕ್ತರಾದ ರಾಯಪ್ಪ ಅವರಿಗೆ ನೀಡಿರುವ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಗೀತಾ ಪಾಂಗಾಳ, ಮಹಿಳಾ ಉಪಾಧ್ಯಕ್ಷರಾದ ದೇವಕಿ ಬಾರ್ಕೂರ್, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಯವರಾದ ಜ್ಯೋತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಅಲ್ಫನ್ಸ್, ಗೋಪಾಲ್ ದೊರೆ, ಜಿಲ್ಲಾ ಕಾರ್ಯದರ್ಶಿಯಾದ ಯೋಗೇಶ್ ಕೋಟ್ಯನ್ ಹಾಗೂ ಜಿಲ್ಲಾ ಸದಸ್ಯರಾದ ಕೋಟ್ಯಾನ್, ಜಾಫರ್, ಸಿದ್ದು, ಅಂಬರೀಶ್ ಮೌನೇಶ್, ವಿಶ್ವನಾಥ್, ಜೆ ಟ್ಟಿಂಗರಾಯ, ಮಡಿಯಪ್ಪ, ಬಸವರಾಜ್ ಅವರುಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.