- ಮಲ್ಪೆ: ದಿನಾಂಕ: 02/10/2024 (ಹಾಯ್ ಉಡುಪಿ ನ್ಯೂಸ್) ಮೂಲ್ಕಿ ಯಿಂದ ಸಂತೆಕಟ್ಟೆ ಕಡೆಗೆ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಚಾಲಕನನ್ನು ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್ ಅವರು ಬಂಧಿಸಿದ್ದಾರೆ.
- ಮಲ್ಪೆ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್ ಅವರು ದಿನಾಂಕ: 02-10-2024 ರಂದು ರೌಂಡ್ಸ್ ಕರ್ತವ್ಯದಲ್ಲಿ ಕಿನ್ನಿಮೂಲ್ಕಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಒಂದು ಟಿಪ್ಪರನ್ನು ಅದರ ಚಾಲಕನು ಮಂಗಳೂರು ಕಡೆಯಿಂದ ಸಂತೆಕಟ್ಟೆ ಕಡೆಗೆ ಅನುಮಾನಾಸ್ಪದವಾಗಿ ಚಲಾಯಿಸಿಕೊಂಡು ಬರುತ್ತಿರುವುದನ್ನು ಕಂಡು ಕಿನ್ನಿ ಮೂಲ್ಕಿ ಸ್ವಾಗತ ಗೋಪುರದ ಬಳಿ ವಾಹನವನ್ನು ನಿಲ್ಲಿಸಲು ಸೂಚಿಸಿದ್ದು, ಆತನು ಸ್ವಲ್ಪ ಮುಂದಕ್ಕೆ ತಂದು ನಿಲ್ಲಿಸಿದ್ದಾನೆ ಎನ್ನಲಾಗಿದೆ.
- ಪೊಲೀಸರು ವಾಹನದ ಬಳಿಗೆ ಹೋಗಿ ನೋಡಿದಾಗ ಟಿಪ್ಪರ್ ನಂಬ್ರ KA-19-AD -0182 ಆಗಿದ್ದು ,ವಾಹನದ ಬಾಡಿಯನ್ನು ನೋಡಿದಾಗ ಬಾಡಿಯಲ್ಲಿ ಮರಳು ತುಂಬಿರುವುದು ಕಂಡುಬಂದಿದ್ದು ಚಾಲಕ ತನ್ನ ಹೆಸರು ಪ್ರಭು ಡಿ ಸನಗಿನ್ ಎಂದು ತಿಳಿಸಿದ್ದು ಮರಳು ಸಾಗಾಟಕ್ಕೆ ಸಂಬಂಧಿಸಿ ಯಾವುದೇ ಪರವಾನಿಗೆ ಇರುವುದಿಲ್ಲವಾಗಿ ತಿಳಿಸಿರುತ್ತಾನೆ ಎನ್ನಲಾಗಿದೆ .
- ಮರಳನ್ನು ಮೂಲ್ಕಿಯ ಸಂಕಲಕೆರೆ ಪಟ್ಟೆಕ್ರಾಸ್ ಎಂಬಲ್ಲಿರುವ ಸಿನೋಜ್ ಎಂಬವರ ದಕ್ಕೆಯಿಂದ ತಂದಿರುವುದಾಗಿ ತಿಳಿಸಿದ್ದು . ಯಾವುದೇ ಪರವಾನಿಗೆ ಇಲ್ಲದೇ ಆರೋಪಿ ಚಾಲಕನು ಮರಳನ್ನು ಕಳ್ಳತನ ಮಾಡಿ ಹಣಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಾಟ ಮಾಡಿದ್ದಾನೆ ಎಂದು ದೂರಲಾಗಿದೆ.
- ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 303(2) BNS ಮತ್ತು 4(A), 21 MMDR ರಂತೆ ಪ್ರಕರಣ ದಾಖಲಾಗಿದೆ.