ಕಾಪು: ದಿನಾಂಕ :02-10-2024 (ಹಾಯ್ ಉಡುಪಿ ನ್ಯೂಸ್) ಮರಳು ಕಳ್ಳತನ ನಡೆಸುತ್ತಿದ್ದ ಟಿಪ್ಪರ್ ಚಾಲಕ ನನ್ನು ಕಾಪು ಪೊಲೀಸ್ ಠಾಣೆಯ ಪಿ.ಎಸ್.ಐ ಯವರಾದ ರಮೇಶ ನಾಯಕ್ ಅವರು ಬಂಧಿಸಿದ್ದಾರೆ.
ಕಾಪು ಪೊಲೀಸ್ ಠಾಣೆ ಪಿಎಸ್ಐ ಯವರಾದ ರಮೇಶ ನಾಯಕ್ ಅವರು ದಿನಾಂಕ: 30.09.2024 ರಂದು ಠಾಣೆಯ ಸಿಬ್ಬಂದಿಯವರೊಂದಿಗೆ ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ದಿನಾಂಕ: 01.10.2024 ರಂದು ಬೆಳಿಗ್ಗೆ 05.00 ಗಂಟೆಯ ಸಮಯಕ್ಕೆ ಟಿಪ್ಪರ್ ವಾಹನವೊಂದನ್ನು ಪರಿಶೀಲಿಸಿದಾಗ ಅದರಲ್ಲಿ ಬಾಡಿಯ ಮಟ್ಟದವರೆಗೆ ಮರಳನ್ನು ತುಂಬಿಸಿರುವುದು, ಆ ಮರಳಿನಿಂದ ನೀರು ಇಳಿಯುತ್ತಿರುವುದು ಕಂಡು ಬಂದಿರುತ್ತದೆ ಎನ್ನಲಾಗಿದೆ.
ವಾಹನದ ನಂಬ್ರ KA 28 A 5907 ಆಗಿದ್ದು, ಪೊಲೀಸರು ವಾಹನದ ಚಾಲಕನ ಹೆಸರು, ವಿಳಾಸ ವಿಚಾರಿಸಿದಾಗ ಮೃತ್ಯುಂಜಯ, (48) ಬೆಜ್ಜವಳ್ಳಿ ಪೋಸ್ಟ್ ಮತ್ತು ಗ್ರಾಮ, ತೀರ್ಥಹಳ್ಳಿ ಎಂದು ಹಾಗು ವಾಹನದ ಮಾಲೀಕರ ಬಗ್ಗೆ ವಿಚಾರಿಸಿದಾಗ ಮಯ್ಯದ್ದಿ ಹುಸೇನ್, ನಡ್ಸಾಲು ಗ್ರಾಮ, ಪಡುಬಿದ್ರಿ ಎಂಬವ ಎಂದು ತಿಳಿಸಿರುತ್ತಾನೆ ಎನ್ನಲಾಗಿದೆ.
ಚಾಲಕ ಮೃತ್ಯುಂಜಯ ಈತನು ತನ್ನ ಸ್ವಂತ ಲಾಭಕ್ಕಾಗಿ ಸರ್ಕಾರಿ ಸ್ವತ್ತಾದ ಖನಿಜವನ್ನು ಕಳವು ಮಾಡಿ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎನ್ನಲಾಗಿದೆ .
ಮರಳು ಸಾಗಿಸುತ್ತಿದ್ದ KA 28 A 5907 ನಂಬ್ರದ ಟಿಪ್ಪರ್ ಮತ್ತು ಅದರಲ್ಲಿದ್ದ ಸುಮಾರು 15,000 ರೂಪಾಯಿ ಬೆಲೆ ಬಾಳುವ ಮರಳು ಹಾಗೂ ಆರೋಪಿಯೊಂದಿಗೆ ಮಾಲೀಕರ ವಿರುದ್ದ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಕಲಂ: 303(2) BNS & ಕಲಂ 4, 4(1ಎ), 21 MMDR ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.