Spread the love

ಮಣಿಪಾಲ: ದಿನಾಂಕ: 01-10-2024 (ಹಾಯ್ ಉಡುಪಿ ನ್ಯೂಸ್) ಕಕ್ಕುಂಜೆ ನಿವಾಸಿ ಯುವಕನೋರ್ವನಿಗೆ ನೆರೆಮನೆಯ ಯುವಕ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ.

ಉಡುಪಿ ಶಿವಳ್ಳಿ ಗ್ರಾಮದ ನಿವಾಸಿ ಗಣೇಶ್ (28) ಎಂಬವರು ದಿನಾಂಕ : 30-09-2024 ರಂದು ಶಿವಳ್ಳಿ ಗ್ರಾಮದ ಕಕ್ಕುಂಜೆ ಶಾಲೆಯ ಬಳಿ ಅವರ  ಸ್ಕೂಟರ್‌ ನಲ್ಲಿ ಬರುತ್ತಿರುವಾಗ  ಗಣೇಶ್ ಅವರ ನೆರೆಮನೆಯ ಪ್ರವೀಣ್‌ ಎಂಬಾತನು ಗಣೇಶ್ ರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಆತನ ಕೈಯಲ್ಲಿ ಇದ್ದ ಹಾಕಿ ಸ್ಟಿಕ್‌ ನಿಂದ  ಗಣೇಶ್ ರವರ ತಲೆಗೆ ಹಾಗೂ ಎಡಕೈಗೆ ಹೊಡೆದಿದ್ದು ಅಲ್ಲದೇ ಕೈಯಿಂದ ಗಣೇಶ್ ರವರ ಕೆನ್ನೆಗೆ ಹೊಡೆದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೋಗಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಗಾಯಗೊಂಡ ಗಣೇಶ್ ರವರನ್ನು ಅವರ ಸ್ನೇಹಿತ ಸಂಪತ್‌ ಎಂಬವರು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ  ಕಲಂ: 126(2), 115(2), 118(1), 352, 351(2) (3) BNS ನಂತೆ ಪ್ರಕರಣ ದಾಖಲಾಗಿದೆ.

error: No Copying!