- ಉಡುಪಿ: ದಿನಾಂಕ:29-09-2024 (ಹಾಯ್ ಉಡುಪಿ ನ್ಯೂಸ್) ಅಲೆವೂರು ನಿವಾಸಿ ಗುಜರಿ ವ್ಯಾಪಾರಿಯೋರ್ವರಿಗೆ ಆನ್ ಲೈನ್ ವ್ಯವಹಾರ ನಡೆಸಿ ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.
- ಉಡುಪಿ ಅಲೆವೂರು ನಿವಾಸಿ ರಾಮ (50) ಎಂಬವರು ಗುಜರಿ ವ್ಯಾಪಾರ ನಡೆಸಿಕೊಂಡಿದ್ದು ಆನ್‌ಲೈನ್ ಮುಖಾಂತರ ಸಹ ಗುಜರಿ ವಸ್ತುಗಳನ್ನು ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.
- ದಿನಾಂಕ:26/09/2024 ರಂದು ಬೆಳಿಗ್ಗೆ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ನಮ್ಮಲ್ಲಿ ಬ್ಯಾಟರಿಗಳಿವೆ ಅದನ್ನು ಎಷ್ಟಕ್ಕೆ ಕೊಂಡುಕೊಳ್ಳುವಿರಿ ಎಂದು ಕೇಳಿದ್ದು ಅದಾದ ನಂತರ ಕೆ.ಜಿ ಗೆ 85 ರೂ ನಂತೆ ಪಡೆಯುವುದಾಗಿ ರಾಮರವರು ಮಾತುಕತೆ ನಡೆಸಿರುತ್ತಾರೆ ಎಂದಿದ್ದಾರೆ .
- ಅಡ್ಪಾನ್ಸ್ ಹಣವಾಗಿ ರೂ 50,000/- ಹಣ ವನ್ನು ನೀಡಲು ಅಪರಿಚಿತ ವ್ಯಕ್ತಿ ತಿಳಿಸಿದ್ದು ರಾಮರವರು ರೂ 25,000/- ಹಣವನ್ನು ಪೋನ್ ಪೇ ಮುಖೇನಾ ಪಾವತಿಸಿರುತ್ತಾರೆ ಎಂದಿದ್ದಾರೆ .ತದನಂತರ ಕರೆ ಮಾಡಿದ ವ್ಯಕ್ತಿಯ ಮೊಬೈಲ್ ಪೋನ್ ಸ್ವಿಚ್ ಆಫ್ ಮಾಡಿದ್ದು ರಾಮರವರಿಂದ ಪಡೆದ ಹಣವನ್ನಾಗಲೀ ಅಥವಾ ಬ್ಯಾಟರಿಯನ್ನಾಗಲೀ ನೀಡದೇ ವಂಚನೆ ಮಾಡಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಕಲಂ: 66 (ಡಿ) ಐ.ಟಿ. ಆಕ್ಟ ಮತ್ತು 318 (4) BNS ನಂತೆ ಪ್ರಕರಣ ದಾಖಲಾಗಿದೆ.