ಕಾರ್ಕಳ: ದಿನಾಂಕ: 25-09-2024(ಹಾಯ್ ಉಡುಪಿ ನ್ಯೂಸ್) ಮಂಗಳೂರಿನ ಹೊಳೆಯೊಂದರಿಂದ ಮರಳು ಕಳ್ಳತನ ನಡೆಸಿ ಕಾರ್ಕಳ ಕಡೆ ಸಾಗುತ್ತಿದ್ದ ಟಿಪ್ಪರ್ ವಾಹನವನ್ನು ಕಾರ್ಕಳ ನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರಿನ ಕಣ್ಣೂರು ಎಂಬಲ್ಲಿನ ಸರಕಾರಿ ಹೊಳೆಯಿಂದ ಆಪಾದಿತ ಲತೀಫ್ ಎಂಬವ ಕಳವು ಮಾಡಿ ನೀಡಿದ ಮರಳನ್ನು KA-19-AE-0844 ನೇ ನಂಬ್ರದ ಟಿಪ್ಪರ್ ಲಾರಿಯಲ್ಲಿ ಮೊಹಮ್ಮದ್ ಶಂಶೀರ್ ಎಂಬವನು ಯಾವುದೇ ಪರವಾನಿಗೆ ಹೊಂದದೇ ಪರವಾನಿಗೆ ನಿಯಮ ಉಲ್ಲಂಘನೆ ಮಾಡಿ ದಿನಾಂಕ 24/09/2024 ರಂದು ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮುರತಂಗಡಿ ಎಂಬಲ್ಲಿ ಸಾಗಾಟ ಮಾಡುತ್ತಿದ್ದನು ಎಂದು ಪೊಲೀಸ್ ತನಿಖೆ ಯಲ್ಲಿ ತಿಳಿದು ಬಂದಿದೆ.
KA-19-AE-0844 ನೇ ಟಿಪ್ಪರ್ ಲಾರಿಗೆ ಮುಂದುಗಡೆ ಮೂಡಬಿದ್ರಿ ಕಡೆಯಿಂದ ಬೆಂಗಾವಲಾಗಿ ಬರುತ್ತಿದ್ದ KA-19-MH-5338 ನೇ ಕಾರನ್ನು ನಿಲ್ಲಿಸುವಂತೆ ಕಾರ್ಕಳ ನಗರ ಪೊಲೀಸರು ಸೂಚನೆ ನೀಡಿದ್ದು ಕಾರನ್ನು ಚಲಾಯಿಸುತ್ತಿದ್ದ ಕಾರ್ಕಳ ಬಂಗ್ಲೆಗುಡ್ಡೆ ನಿವಾಸಿ ಆಸೀಫ್ ಮತ್ತು ಕಾರಿನಲ್ಲಿದ್ದ ಕಾರ್ಕಳ ಪುಲ್ಕೇರಿಯ ರಾಜೇಶ್ ಕಾರು ಸಮೇತ ಓಡಿ ಹೋಗಿರುತ್ತಾರೆ ಎಂದು ದೂರಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 303(2) ಜೊತೆಗೆ 3(5) BNS, ಕಲಂ: 4(1-a), 21(4) M.M.R.D ACT 1957 ಕಲಂ: 66 ಜೊತೆಗೆ 192 (ಎ), 179(1) IMV ACT ರಂತೆ ಪ್ರಕರಣ ದಾಖಲಾಗಿದೆ.