ಕುಂದಾಪುರ : ದಿನಾಂಕ :25-09-2024 (ಹಾಯ್ ಉಡುಪಿ ನ್ಯೂಸ್)
ಈಗಾಗಲೇ ಕಾಂಗ್ರೆಸ್ ಮುಖಂಡ ವಿಕಾಸ್ ಹೆಗ್ದೆಯವರು ಕುಂದಾಪುರ ಪುರಸಭೆ ಅಧ್ಯಕ್ಷರಾದ ಮೋಹನ್ ದಾಸ ಶೆಣೈ ಯವರ ಮೇಲೆ ಟೆಂಡರ್ ನಲ್ಲಿ ಗೋಲ್ ಮಾಲ್ ಆಗಿದೆ, ಇದರಿಂದ ಕುಂದಾಪುರ ಪುರಸಭೆಗೆ ಸಾಕಷ್ಟು ನಷ್ಟ ಆಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದಾರೆ.
ಆದರೆ ವಿಪರ್ಯಾಸ ಏನೆಂದರೆ ಕಾಂಗ್ರೆಸ್ ಪಕ್ಷದ ಹಿರಿಯ ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷರಾದ ದೇವಕಿ ಸಣ್ಣಯ್ಯರವರು ಕಾಂಗ್ರೆಸ್ ಸದಸ್ಯರಲ್ಲಿ ಸುಮ್ಮನೆ ವಿಷಯ ದೊಡ್ಡದು ಮಾಡುವುದು ಬೇಡ ಮೋಹನ್ ದಾಸ ಅವರೇ ಮುಂದುವರೆಯಲಿ ಅವರು ಇದ್ದರೆ ನಮಗೂ ಅನುಕೂಲ ಆಗುತ್ತೆ ಎನ್ನುವ ರೀತಿಯಿಂದ ಹೊಂದಾಣಿಕೆ ರಾಜಕಾರಣ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಸುದ್ದಿ ಯಾಗಿದೆ.
ಇವರು “ಹಿಂದೆ ಒಂದು ” “ಮುಂದೆ ಒಂದು” ಮಾತಾಡುವುದು ಮೊದಲಿನಿಂದಲೂ ಇವರ ಪ್ರವೃತ್ತಿಯೆನ್ನಲಾಗಿದ್ದು ಕೆಲವೊಂದು ಸಾರಿ ಕಾಂಗ್ರೆಸ್ ಪಕ್ಷದಲ್ಲಿ ನಾನೇ ಹಿರಿಯ ನಾಯಕಿ ಎಂದು ಕೊಂಡು ಹಿರಿಯ ಎಂಎಲ್ಎ,ಎಂಪಿ, ಕಾಂಗ್ರೆಸ್ ನಾಯಕರುಗಳಿಗೆ ಅಗೌರವ ತೋರಿರುವುದು ಇದೇನೂ ಹೊಸತಲ್ಲ ಎನ್ನಲಾಗಿದೆ .
ಮೊದಲು ನಾನೇ ಬಂದಿದ್ದು ಎಂದು ಹೇಳಿ ಕೊಂಡು ಈ ಹಿಂದೆಯೂ UGD ಹಗರಣವನ್ನು ಬಗೆದು ತಪ್ಪಿತಸ್ಥರನ್ನು ಜೈಲಿಗಟ್ಟುತ್ತೇನೆ ಎಂದು ಹೇಳಿದ ದೇವಕಿ ಸಣ್ಣಯ್ಯ ಏಕಾಏಕಿ ಆ ಹೋರಾಟವನ್ನು ಬಿಟ್ಟಿದ್ದೇಕೆ? ಇನ್ನೂ ಹಲವಾರು ಪ್ರಕರಣಗಳನ್ನು ಹೊರತೆಗೆದು ತಪ್ಪಿತಸ್ಥರಿಗೆ ಶಿಕ್ಷೆ ಕೊಡುತ್ತೇನೆ ಎಂದು ಹೇಳಿ ನಂತರ ಸುಮ್ಮನೆ ಕೂತಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.
ವಿಕಾಸ್ ಹೆಗ್ದೆಯವರೇ ಮೊದಲು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವ ದೇವಕಿ ಸಣ್ಣಯ್ಯರವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ಹಾಲಿ ಪುರ ಸಭೆ ಅಧ್ಯಕ್ಷರು ಮಾಡಿದ ಟೆಂಡರ್ ಗೋಲ್ಮಾಲ್ ವಿರುದ್ಧ ಕ್ರಮ ಕೈಗೊಳ್ಳುವುದು ಕೇವಲ ಹೇಳಿಕೆ ಆದರೆ ಸಾಲದು, ದಾಖಲೆಗಳನ್ನು ಲೋಕಾಯುಕ್ತಕ್ಕೆ ನೀಡಿ ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.