- ಕಾರ್ಕಳ: ದಿನಾಂಕ :24-09-2024(ಹಾಯ್ ಉಡುಪಿ ನ್ಯೂಸ್) ಕುಕ್ಕುಂದೂರು ಗ್ರಾಮದ ನಿವಾಸಿಯೋರ್ವರ ಎಟಿಎಂ ಕಾರ್ಡ್ ಅನ್ನು ಬದಲಾಯಿಸಿ ವಂಚನೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.
- ಕಾರ್ಕಳ ,ಕುಕ್ಕುಂದೂರು ಗ್ರಾಮದ ನಿವಾಸಿ ರಫೀಕ್ ಅಹ್ಮದ್ (66) ಎಂಬವರು ದಿನಾಂಕ 16/09/2024 ರಂದು ಅವರ ಹೆಂಡತಿ ಶ್ರೀಮತಿ. ಸಮೀನಾ ಬೇಗಂ ಅವರ ಕೆನರಾ ಬ್ಯಾಂಕ್ ಕಾರ್ಕಳ ಶಾಖೆಯ ಎಟಿಎಮ್‌ನಿಂದ ಹಣ ಪಡೆಯಲು ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಎಂಬಲ್ಲಿ ಇರುವ ಬ್ಯಾಂಕ್ ಆಫ್ ಬರೋಡಾ ಎಟಿಎಮ್‌ನಿಂದ ಹಣ ತೆಗೆಯಲು ಹೋದಾಗ ಅಲ್ಲಿ ಎರಡು ಜನ ಅಪರಿಚಿತ ವ್ಯಕ್ತಿಗಳು ಇದ್ದು, ಅವರು ರಫೀಕ್ ಅಹ್ಮದ್ ಗಮನವನ್ನು ಬೇರೆ ಕಡೆ ಸೆಳೆದು ಅವರ ಗಮನಕ್ಕೆ ಬಾರದಂತೆ ಎಟಿಎಮ್‌ಕಾರ್ಡ ಬದಲಾವಣೆ ಮಾಡಿ ನಂತರ ರಫೀಕ್ ಅಹ್ಮದ್ ಅವರ ಹೆಂಡತಿಗೆ ಸೇರಿದ ಎಟಿಎಮ್ ಕಾರ್ಡನ್ನು ಬಳಸಿಕೊಂಡು ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಬಂಢಿಮಠ ಎಂಬಲ್ಲಿ ಇರುವ ಫೆಡರಲ್ ಬ್ಯಾಂಕ್ ಎಟಿಎಮ್‌ನಿಂದ 70,000/- ರೂಪಾಯಿ ಡ್ರಾ ಮಾಡಿ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
- ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 318(4) R/W 3(5) BNS ACT ರಂತೆ ಪ್ರಕರಣ ದಾಖಲಾಗಿದೆ.