Spread the love

ಕಾಪು: ದಿನಾಂಕ 11/09/2024 (ಹಾಯ್ ಉಡುಪಿ ನ್ಯೂಸ್) ಕಟಪಾಡಿ ಜಂಕ್ಷನ್ ನ ಬಾರ್ ಒಂದರ ಎದುರಿನಲ್ಲಿ ಮಟ್ಕಾ ಜುಗಾರಿ ಬರೆಯುತ್ತಿದ್ದ ವ್ಯಕ್ತಿಯನ್ನು ಕಾಪು  ಠಾಣಾಧಿಕಾರಿಯವರು ಬಂಧಿಸಿದ್ದಾರೆ.

ಮೂಡಬೆಟ್ಟು ಗ್ರಾಮದ ಕಟಪಾಡಿ ಜಂಕ್ಷನ್ ನ ಲತಾ ವೈನ್ಸ್‌ ಸಮೀಪದ ಗೂಡಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಓವ೯ ವ್ಯಕ್ತಿ ಸಾವ೯ಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ ಕಾಪು ಠಾಣಾಧಿಕಾರಿಯವರಿಗೆ ಸಾರ್ವಜನಿಕರಿಂದ ದಿನಾಂಕ: 10-09-2024 ರಂದು ಮಾಹಿತಿ ಬಂದಿದೆ ಎನ್ನಲಾಗಿದೆ.

ಪೊಲೀಸರು ಕೂಡಲೇ ಲತಾ ವೈನ್ಸ್‌ ಸಮೀಪ ಹೋಗಿ ಮರೆಯಲ್ಲಿ ನಿಂತು ನೋಡಿದಾಗ ಲತಾ ವೈನ್ಸ್‌ ನ ಬದಿಯ ಗೂಡಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಹಲವು ಜನರು ಗುಂಪು ಸೇರಿದ್ದು, ಅವರುಗಳ ಮಧ್ಯದಲ್ಲಿ ಓರ್ವ ವ್ಯಕ್ತಿಯು ಕೈಯಲ್ಲಿ ಚೀಟಿ ಬರೆಯುತ್ತಾ 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಜೋರಾಗಿ ಹೇಳುತ್ತಿದ್ದು. ಸಾರ್ವಜನಿಕರು ಹಣವನ್ನು ನಂಬ್ರಗಳ ಮೇಲೆ ಪಣವಾಗಿ ಕಟ್ಟುತ್ತಿದ್ದು ವ್ಯಕ್ತಿ ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸುತ್ತಿದ್ದು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದ ವ್ಯಕ್ತಿ ಯನ್ನು ಪೊಲೀಸರು ಬಂಧಿಸಿದ್ದಾರೆ.

ಸಾವ೯ಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿಯ ವಿರುದ್ಧ ಕಾಪು ಪೊಲೀಸ್‌ ಠಾಣೆಯಲ್ಲಿ ಕಲಂ: 78 (i) (iii) K.P Act ರಂತೆ ಪ್ರಕರಣ ದಾಖಲಾಗಿದೆ.

error: No Copying!