ಮಣಿಪಾಲ: ದಿನಾಂಕ 11/09/2024 ( ಹಾಯ್ ಉಡುಪಿ ನ್ಯೂಸ್) ಪ್ರಗತಿ ನಗರದ ಲೇಬರ್ ಕಾಲೋನಿಯಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಐವರನ್ನು ಮಣಿಪಾಲ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಅಕ್ಷಯ ಕುಮಾರಿ ಎಸ್ ಎನ್, ಅವರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಕ್ಷಯ ಕುಮಾರಿ ಅವರಿಗೆ ದಿನಾಂಕ: 10-09-2024 ರಂದು ಸಾರ್ವಜನಿಕರಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ ಅಲೆವೂರು ಗ್ರಾಮದ, ಪ್ರಗತಿ ನಗರ ಲೇಬರ್ ಕಾಲೋನಿ ಅಂಬೇಡ್ಕರ್ ಭವನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿಟ್ಟುಕೊಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ .
ಅಲ್ಲಿ ಇಸ್ಫಿಟ್ ಜುಗಾರಿ ಆಡುತ್ತಿದ್ದ 1) ಹುಸೇನ್ ಸಾಬ್ , 2) ಸಚಿನ್, 3) ಹುಸೇನ್ ಸಾಬ್ , 4) ಬಸವರಾಜ್, 5) ಮುತ್ತು ಎಂಬವರನ್ನು ಹಾಗೂ ಅಂದರ್ ಬಾಹರ್ ಆಟಕ್ಕೆ ಬಳಸಿದ ಇಸ್ಪೀಟ್ ಎಲೆಗಳು, ದಿನ ಪತ್ರಿಕೆ ಮತ್ತು ನಗದು ರೂಪಾಯಿ 4960/- ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿದೆ.