ಗಂಗೊಳ್ಳಿ: ದಿನಾಂಕ :06-09-2024(ಹಾಯ್ ಉಡುಪಿ ನ್ಯೂಸ್) ಸೇನಾಪುರ ಗ್ರಾಮದ ಬಂಟ್ವಾಡಿ ಅಂಗನವಾಡಿ ಕೇಂದ್ರದಲ್ಲಿ ಕಳ್ಳತನ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.
ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ನಿವಾಸಿ ವಿಶಾಲ (33) ಎಂಬವರು ಸೇನಾಪುರ ಗ್ರಾಮದ ಬಂಟ್ವಾಡಿ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿರುತ್ತಾರೆ ಎನ್ನಲಾಗಿದೆ. ದಿನಾಂಕ 21/08/2024 ರಂದು ರಾತ್ರಿ ಯಾರೋ ಕಳ್ಳರು ಅಂಗನವಾಡಿ ಕೇಂದ್ರದ ಎದುರಿನ ಬಾಗಿಲಿನ ಚಿಲಕ ಮುರಿದು ಒಳಗೆ ಪ್ರವೇಶಿಸಿ ಅಂಗನವಾಡಿ ಕೇಂದ್ರದ ದಾಖಲೆಗಳನ್ನು ಚೆಲ್ಲಾಪಿಲ್ಲಿಯನ್ನಾಗಿಸಿ ಅಂಗನವಾಡಿ ಕೇಂದ್ರದ 6 ತಿಂಗಳಿಂದ 6 ವರ್ಷದ ವರೆಗಿನ ಮಕ್ಕಳನ್ನು ತೂಕ ಮಾಡುವ Prestige ಕಂಪನಿಯ ಹೊಸ ಮಶೀನ್‌ನನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರಿದ್ದಾರೆ. ಕಳ್ಳತನ ಮಾಡಿದ್ದ ಸ್ವತ್ತು ವಿನ ಮೌಲ್ಯ ರೂಪಾಯಿ 2,500/- ರಿಂದ 3,000/- ಆಗಿರುತ್ತದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ: 331(4), 305 BNS ನಂತೆ ಪ್ರಕರಣ ದಾಖಲಾಗಿದೆ.