Spread the love
  • ಶಂಕರನಾರಾಯಣ: ದಿನಾಂಕ :06-09-2024(ಹಾಯ್ ಉಡುಪಿ ನ್ಯೂಸ್) ಪ್ಲೋರಿನ್ ಫಿಲೋಮಿನಾ ಎಂಬವರ ಕಾರನ್ನು ಉಡುಪಿ ಆರ್ .ಟಿ.ಓ ಕಚೇರಿಯಲ್ಲಿ ಬ್ರೋಕರ್ ಗಳು ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
  • ಹೆಬ್ರಿ ತಾಲೂಕು, ಬೆಳ್ವೆ ಗ್ರಾಮದ ನಿವಾಸಿ ಫ್ಲೋರಿನ್ ಫಿಲೋಮಿನಾ ಎಂಬವರು  KA 20 MD 6351 ನೇ ಮಾರುತಿ ಸುಜುಕಿ ಸ್ವಿಪ್ಟ್ ಪ್ರೈವೇಟ್ ಕಂಪನಿಯ ಕಾರಿನ ಮಾಲೀಕಳಾಗಿದ್ದು. ಆ ಕಾರನ್ನು ದಿನಾಂಕ; 13-05-2024 ರಂದು ಪರಿಚಯದ ಕುಂದಾಪುರದ ಸಾಯಿ ಡ್ರೀಮ್ ಕಾರ್‌ ಶೊರೂಮ್ ಮಾಲೀಕರಾದ ನಾಗೇಂದ್ರ ಎಂಬ ವರಿಗೆ 5,90,000 ರೂಪಾಯಿಗೆ ಮಾರಾಟ ಮಾಡಿ ಕಾರಿನ ಎಲ್ಲಾ ಮೂಲ ದಾಖಲಾತಿಗಳನ್ನು ಹಾಗೂ ಅವರ ಹೆಸರಿನಲ್ಲಿದ್ದ ಕಾರನ್ನು ವರ್ಗಾವಣೆ ಮಾಡಲು ಬೇಕಾದ ಪತ್ರಗಳಿಗೆ  ಸಹಿಮಾಡಿ ನಾಗೇಂದ್ರ ರವರಿಗೆ ಕೊಟ್ಟಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  • ಆದರೆ ದಿನಾಂಕ: 22-07-2024 ರಂದು ಅವರ  ಗಂಡನ ಮೊಬೈಲ್‌ಗೆ RTO ಆಫೀಸ್‌ನಿಂದ ಸತೀಶ ಎಂಬುವವರು ಕರೆ ಮಾಡಿ  ನಿಮ್ಮ ಹೆಂಡತಿ ಅವರ ಕಾರಿನ ವರ್ಗಾವಣೆಗೆ ನೀಡಿದ ಸಹಿ ತಪ್ಪಾಗಿದ್ದು ಸರಿಪಡಿಸುವಂತೆ RTO OFFICE UDUPI ಗೆ  ORGINAL ಆಧಾರ್ ಕಾರ್ಡ್ ನೊಂದಿಗೆ  ಬರುವಂತೆ ತಿಳಿಸಿದ್ದರು ಎನ್ನಲಾಗಿದೆ .
  • ಉಡುಪಿಗೆ ಬರಲು ವಾಹನದ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾಗಿ ಫಿಲೋಮಿನಾ ಅವರ ಗಂಡ ತಿಳಿಸಿದ್ದು, ಅವನು ಹೇಳಿದಂತೆ ಫಿಲೋಮಿನಾ ಅವರು RTO ಆಫೀಸ್‌ನ ಸತೀಶ ಅವರು ಹೇಳಿದಂತೆ ಅವರು ಕಳುಹಿಸಿದ ಕಾರಿನಲ್ಲಿ ದಿನಾಂಕ 27.07.2024 ರಂದು ಫಿಲೋಮಿನಾ ಅವರನ್ನು ಆ ಕಾರಿನಲ್ಲಿ RTO OFFICE UDUPI ಗೆ ಕರೆದುಕೊಂಡು ಹೋಗಿ ಅಲ್ಲಿ ಸತೀಶ ಅವರು ಹೇಳಿದ  ಹಾಗೆ ಸಹಿಯನ್ನು ಮಾಡಿ ಬಂದಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
  • ದಿನಾಂಕ; 29-08-2024 ರಂದು ಫಿಲೋಮಿನಾರವರಿಗೆ ನಾಗೇಂದ್ರರವರು ಕರೆ ಮಾಡಿ ನಾನು ಮಾರಾಟ ಮಾಡಿದ ಕಾರನ್ನು ಬೇರೆಯವರಿಗೆ ವರ್ಗಾವಣೆ  ಮಾಡಲು RTO OFFICE ಉಡುಪಿಗೆ ಹೋದಾಗ ಈಗಾಗಲೇ ಆ ಕಾರನ್ನು ಸಿಸಿ ತೆಗೆಯುವ ಮೂಲಕ ಧಾರವಾಡದ RTO ಕಛೇರಿಯಲ್ಲಿ ಫಾರೂಕ್ ಅಹ್ಮದ್ ಖಾತಿಬ್ ಧಾರವಾಡ ಎಂಬವರ ಹೆಸರಿಗೆ ವರ್ಗಾವಣೆ ಆಗಿರುವುದಾಗಿ ತಿಳಿಸಿರುತ್ತಾರೆ ಎಂದಿದ್ದಾರೆ . ಆಗ ಫಿಲೋಮಿನಾರವರು ಕಾರು ನೀಡಿದ ನಾಗೇಂದ್ರರವರಿಗೆ ಸತೀಶ್ ರವರು  ಆರ್ ಟಿ ಒ ಕಛೇರಿಗೆ ಕರೆಯಿಸಿ ಸಹಿ ಸರಿಯಿಲ್ಲವೆಂದು ಸಹಿ ಮಾಡಿಸಿಕೊಂಡಿರುವುದಾಗಿ ತಿಳಿಸಿರುತ್ತಾರೆ ಎಂದಿದ್ಧು ಆಗ ನಾಗೇಂದ್ರನು ನಾನು ಯಾರಿಗೂ  ವರ್ಗಾವಣೆ  ಮಾಡಿರುವುದಿಲ್ಲ ಕಾರಿನ ಎಲ್ಲ ಮೂಲ  ದಾಖಲೆಗಳು ಹಾಗೂ ನಾನು ಸಹಿ ಮಾಡಿ ನೀಡಿದ ವರ್ಗಾವಣೆಗೆ ಬೇಕಾದ ಪತ್ರ ನನ್ನ ಹತ್ತಿರ ಇರುವುದಾಗಿ ತಿಳಿಸಿರುತ್ತಾರೆ ಎಂದಿದ್ದಾರೆ . ಸತೀಶ್ ರವರು  ನನ್ನನ್ನು ಮೋಸ ಮಾಡುವ ಉದ್ದೇಶದಿಂದ ನನ್ನನ್ನು ನಂಬಿಸಿ ಉಡುಪಿ ಆರ್ ಟಿ ಒ ಆಫೀಸ್ ನಲ್ಲಿ  ನನ್ನ ಸಹಿಯನ್ನು ಪಡೆದು ನನಗೆ ತಿಳಿಯದಂತೆ ಆರ್ ಟಿ ಒ ಕಛೇರಿಯಿಂದ ಸತೀಶ್ ರವರು ಕಾರಿನ CLEARANCE CERTIFICATE ತೆಗೆದು  ಧಾರವಾಡದ  ಫಾರೂಕ್ ಅಹ್ಮದ್ ಖಾತಿಬ್ ರವರೊಂದಿಗೆ ಸೇರಿ ಕಾರಿನ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಧಾರವಾಡ ಆರ್,ಟಿ,ಒ ದಲ್ಲಿ ಫಾರೂಕ್ ಅಹ್ಮದ್ ಖಾತಿಬ್ ಹೆಸರಿನಲ್ಲಿ ನೊಂದಾಯಿಸಿ ನನಗೆ ಮೋಸ ಮಾಡಿರುತ್ತಾರೆ. ನನ್ನ ವಾಹನದಂತೆ ಮತ್ತೊಂದು ವಾಹನವನ್ನು ಸೃಷ್ಟಿಸಿ ಅದಕ್ಕೆ ನನ್ನ ವಾಹನದ   KA 20 MD 6351 ನಂಬ್ರವನ್ನು ನೊಂದಣಿ ಮಾಡಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿರುತ್ತಾರೆ. ಅದ್ದರಿಂದ ನನಗೆ ಈ ರೀತಿ ನಂಬಿಕೆ ದ್ರೋಹ ನಡೆಸಿ ಕಾರಿನ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಿದ ಸತೀಶ್ ದೇವಾಡಿಗ ತ್ರಾಸಿ ಹಾಗೂ ಫಾರೂಕ್ ಅಹ್ಮದ್ ಖಾತಿಬ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಫ್ಲೋರಿನ್ ಫಿಲೋಮಿನಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
  • ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ  ಕಲಂ   318(4), 316(1), 340(2), 336(1), 336(3) R/W 3(5) BNS ನಂತೆ ಪ್ರಕರಣ ದಾಖಲಾಗಿದೆ.
error: No Copying!