Spread the love

ಉಡುಪಿ: ದಿನಾಂಕ:30-08-2024 (ಹಾಯ್ ಉಡುಪಿ ನ್ಯೂಸ್)  ರಸ್ತೆಯಲ್ಲಿ ಕಾರನ್ನು ಅಡ್ಡವಾಗಿ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುಬಿದ್ರಿ ,ನಡ್ಸಲ್ ಗ್ರಾಮದ ನಿವಾಸಿ ಪವನ್ (21) ಎಂಬವರು ಹಾಗೂ ಅವರ ಸ್ನೇಹಿತರಾದ ಶ್ರೇಯಸ್‌, ಪ್ರಿಯಾಲ್‌ ಮತ್ತು ಪ್ರೀತಿಕ್‌ ಎಂಬವರೊಂದಿಗೆ ದಿನಾಂಕ 27/08/2024 ರಂದು ಪಡುಬಿದ್ರಿಯಿಂದ XUV300 ಕಾರು ನಂಬ್ರ KA-20-MC-8924 ರಲ್ಲಿ ಹೊರಟು ಸಂಜೆ ಸಮಯಕ್ಕೆ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯಿಂದ ಕರಾವಳಿ ಬೈಪಾಸ್‌ ಕಡೆ ಹೋಗಲು ಸರ್ವಿಸ್‌ ರೋಡ್‌ ನಲ್ಲಿ ಬರುತ್ತಿರುವಾಗ ಶ್ಯಾಮಿಲಿ ಸಭಾಭವನದ ಮುಂದೆ ಸಿಪಿಸಿ ಲೇಔಟ್‌ ರಸ್ತೆ ಕಡೆಯಿಂದ ಕಪ್ಪು ಬಣ್ಣದ ಕ್ರೇಟಾ ಕಾರು  ಏಕಾಏಕಿಯಾಗಿ ಅಡ್ಡವಾಗಿ ಬಂದು ನಿಲ್ಲಿಸಿದ್ದು ತೆಗೆಯಲು ಹೇಳಿದಾಗ ಕಾರಿನಿಂದ ಇಳಿದ ಓರ್ವ ವ್ಯಕ್ತಿ  ಪವನ್ ರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದಿದ್ದಾನೆ ಎನ್ನಲಾಗಿದೆ .

ಅದೇ ಕಾರಿನಿಂದ ಮತ್ತೋರ್ವ ಮಹಿಳೆ ಇಳಿದು ಬೈದಿದ್ದು, ಆ ವ್ಯಕ್ತಿಯು ತನ್ನ ಕಾರಿನಲ್ಲಿದ್ದ ರಾಡನ್ನು ತಂದು ಪವನ್ ರ ತಲೆಗೆ ಬೀಸಿದಾಗ ಅವರು ತಪ್ಪಿಸಿಕೊಂಡಿದ್ದು ಬೆದರಿಕೆ ಹಾಕಿ ರಾಡಿನಿಂದ ಹೊಟ್ಟೆಗೆ ತಿವಿದಿದ್ದು, ಆಗ ಪವನ್ ರವರು ಕೆಳಗೆ ಬಿದ್ದಿದ್ದು ಪುನಃ ತಲೆಗೆ ಹೊಡೆಯಲು ಬಂದಾಗ ತಪ್ಪಿಸಿಕೊಂಡಿದ್ದು, ಅದೇ ಸಮಯಕ್ಕೆ ಪವನ್ ಅವರ ಸ್ನೇಹಿತರು ಜೋರಾಗಿ ಬೊಬ್ಬೆ ಹೊಡೆದಾಗ ಅವರುಗಳು ಹೋಗಿದ್ದಾರೆ ಎಂದು ಪೊಲೀಸರಿಗೆ ದೂರಿದ್ದಾರೆ.

ಅವರು ಬಂದ ಕಾರ್‌ ನಂಬ್ರ ನೋಡಿದಾಗ KA-20-MC-6012 ಆಗಿದ್ದು ಬಳಿಕ  ಅಲ್ಲಿ ಸೇರಿದ್ದ ಸಾರ್ವಜನಿಕರು ಕಾರಿನಲ್ಲಿ ಬಂದು ಹಲ್ಲೆ ನಡೆಸಿದ ವ್ಯಕ್ತಿಯ ಹೆಸರು ವಿಕ್ಕಿ ಎಂದು  ತಿಳಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ : 115(2), 118(1), 126(2), 109, 352, 351(2) R/W 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!