ಬ್ರಹ್ಮಾವರ: ದಿನಾಂಕ:30-08-2024(ಹಾಯ್ ಉಡುಪಿ ನ್ಯೂಸ್)
ಸರಕಾರಿ ಶಾಲೆ ಉಳಿಯಲಿ ಬೆಳೆಯಲಿ ನೆರೆಹೊರೆಯ ಸಮಾನ ಶಾಲೆಯಾಗಲಿ ,ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ವೇದಿಕೆ ಉಡುಪಿ ಜಿಲ್ಲೆ ಇದರ ಬ್ರಹ್ಮಾವರ ತಾಲೂಕು ನೂತನ ಸಮನ್ವಯ ವೇದಿಕೆ ಅಧ್ಯಕ್ಷರಾಗಿ ವಿಶ್ವನಾಥ ಬೆಳ್ಳಂಪಳ್ಳಿ ಅವರು ಆಯ್ಕೆಯಾಗಿದ್ದಾರೆ.
ವಿಶ್ವನಾಥ ಬೆಳ್ಳಂಪಳ್ಳಿ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕೆಹಳ್ಳಿಯಲ್ಲಿ ಎಸ್ ಡಿ ಎಂ ಸಿ ಸದಸ್ಯರಾಗಿ 3 ವರ್ಷದಿಂದ ಸೇವೆ ಸಲ್ಲಿಸಿದ್ದು ಹಾಗೆಯೇ ಸಮನ್ವಯ ವೇದಿಕೆಯಲ್ಲಿ ಸತತ 6 ವರ್ಷದಿಂದ ಸೇವಿ ಸಲ್ಲಿಸುತ್ತಿದ್ದಾರೆ ,ಮೂರು ವರ್ಷದಿಂದ ಸಮನ್ವಯ ವೇದಿಕೆ ಬ್ರಹ್ಮಾವರ ತಾಲೂಕು ಉಪಾಧ್ಯಕ್ಷರಾಗಿ ಹಾಗೆಯೇ ರಾಜ್ಯ ಮಟ್ಟದಲ್ಲಿ ಹಲವು ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವಂತಹ ಹಲವು ಸಮಾಜಮುಖಿ ಕಾರ್ಯಯೋನ್ಮುಖ ಕೆಲಸ ಮಾಡಿರುವ ಹಾಗೆಯೇ ಸರಕಾರಿ ಶಾಲೆಯ ಮಕ್ಕಳಿಗೆ ಸಮಸ್ಯೆ ಬಂದಲ್ಲಿ ಅಲ್ಲಿ ಸಮಸ್ಯೆಗೆ ಪರಿಹಾರ ಕೊಡುವಲ್ಲಿ ಯಶಸ್ವಿಯಾಗಿದ್ದು ಇವರು ಹಲವಾರು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ.