Spread the love

ಮಲ್ಪೆ: ದಿನಾಂಕ:23-08-2024(ಹಾಯ್ ಉಡುಪಿ ನ್ಯೂಸ್) ಕಲ್ಮಾಡಿ ರಿಕ್ಷಾ ಚಾಲಕರೋರ್ವರಿಗೆ ವ್ಯಕ್ತಿ ಯೋರ್ವ ಚೂರಿ ಇರಿತ  ಮಾಡಿರುವ ಬಗ್ಗೆ ದೂರು ನೀಡಿದ್ದಾರೆ.

ಕಲ್ಮಾಡಿ ನಿವಾಸಿ ಬೊಗ್ಗು (65) ಎಂಬವರು ಆಟೋ ರಿಕ್ಷಾ ಚಾಲಕರಾಗಿದ್ದು, ದಿನಾಂಕ 21/08/2024 ರಂದು ಬೆಳಿಗ್ಗೆ  ಉಡುಪಿ ತಾಲೂಕು ಕೊಡವೂರು ಗ್ರಾಮದ ಕಲ್ಮಾಡಿ ಆಟೋ ರಿಕ್ಷಾ ನಿಲ್ದಾಣದ ಬಳಿ ನಿಂತುಕೊಂಡಿದ್ದಾಗ ಆಪಾದಿತ ಪ್ರಭಾಕರ ಕಾನಂಗಿ ಎಂಬವನು ಬೊಗ್ಗು ರವರೊಂದಿಗೆ ಹಳೆಯ ವೈಯಕ್ತಿಕ ದ್ವೇಷದಿಂದಾಗಿ ಏಕಾಏಕಿಯಾಗಿ ಚಾಕು ತೆಗೆದು ಬೊಗ್ಗು ರವರ ಎಡಕಣ್ಣಿಗೆ ಮತ್ತು ತೋರು ಬೆರಳಿಗೆ ಹಲ್ಲೆ ಮಾಡಿ, ಚಾಕುವನ್ನು ಸ್ಥಳದಲ್ಲಿಯೇ ಹಾಕಿ ಹೋಗಿರುತ್ತಾನೆ ಎಂದು ಬೊಗ್ಗು ರವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ  ಕಲಂ: 118(1) BNS ನಂತೆ ಪ್ರಕರಣ ದಾಖಲಾಗಿದೆ.

error: No Copying!