ದಿನಾಂಕ:23-08-2024(ಹಾಯ್ ಉಡುಪಿ ನ್ಯೂಸ್)
2017 ನೇ ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಸಂಸ್ಥೆ ಗೌರವಾಧ್ಯಕ್ಷ, ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ್ ಉದ್ಯಾವರ್ ರವರ ಹನ್ನೆರಡನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ ತಾರೀಕು 29 – 08 – 2024, ಗುರುವಾರ ಸಂಜೆ ಗಂಟೆ 5.00 ಕ್ಕೆ ಉದ್ಯಾವರ ಶ್ರೀ ವಿಠೋಬ ರುಖುಮಾಯಿ ನಾರಾಯಣ ಗುರು ಮಂದಿರದಲ್ಲಿ ಜರಗಲಿದೆ .
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಬಿ.ಭುಜಂಗ ಶೆಟ್ಟಿ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಮಂಗಳೂರು ನಗರಪಾಲಿಕೆಯ ಸದಸ್ಯರಾದ ಶ್ರೀ ನವೀನ್ ಡಿಸೋಜ ಉಡುಪಿ ಜಿಲ್ಲಾ ಕೆ.ಡಿ.ಪಿ ಸದಸ್ಯರಾದ ಶ್ರೀ ಪ್ರಸನ್ನ ಕುಮಾರ್ ಶೆಟ್ಟಿ, ಉದ್ಯಾವರ ಬಿಲ್ಲವ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕೋಟ್ಯಾನ್ , ಭಾಗವಹಿಸಲಿರುವರು.
ಸಮಾರಂಭದಲ್ಲಿ ಅರ್ಹರಿಗೆ ವೈದ್ಯಕೀಯ ನೆರವು ವಿತರಿಸಲಾಗುವುದು
ನಂತರ ಕಲಾಭಿ ಥಿಯೇಟರ್ – ಮಂಗಳೂರು ಇವರಿಂದ ಜಪಾನಿನ ಬುನ್ರಾಕು ಬೊಂಬೆಯಾಟ ಪುರ್ಸನ ಪುಗ್ಗೆ ಶ್ರವಣ್ ಹೆಗ್ಗೋಡು ನಿರ್ದೇಶನದಲ್ಲಿ ಜರಗಲಿರುವುದು.
ತಾ.01.09.2024 ಭಾನುವಾರ ಬೆಳಿಗ್ಗೆ ಗಂಟೆ 9.30 ರಿಂದ-ಮಧ್ಯಾಹ್ನ ಗಂಟೆ 1.00 ತನಕ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಲಿರುವುದು.
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಗೀತಾ ವಾಗ್ಳೆ ರಕ್ತದಾನ ಶಿಬಿರವನ್ನು ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಬೆಂಗಳೂರು ಕೆ.ಪಿ.ಸಿ.ಸಿ ಸದಸ್ಯರಾದ ಶ್ರೀ ದಿನೇಶ್ ಪುತ್ರನ್ ಮತ್ತು ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ ಇದರ ಗೌರವಾಧ್ಯಕ್ಷರಾದ ಶ್ರೀ ಸದಾಶಿವ ಅಮಿನ್ ಕಟ್ಟೆಗುಡ್ಡೆ ಭಾಗವಹಿಸಲಿರುವರು .
ಈ ಎಲ್ಲಾ ಕಾರ್ಯಕ್ರಮಗಳಿಗೆ ಮಂಜುನಾಥ್ ಉದ್ಯಾವರ್ ಅವರ ಗೆಳೆಯರು ಹಿತೈಷಿಗಳು ಮತ್ತು ಸಂಸ್ಥೆಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭವನ್ನು ಯಶಸ್ವಿಗೊಳಿಸಬೇಕು ಎಂದು ಸಂಸ್ಥೆ ಗೌರವಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್, ಅಧ್ಯಕ್ಷರಾದ ತಿಲಕ್ ರಾಜ್ ಸಾಲ್ಯಾನ್ ,ಪ್ರಧಾನ ಕಾರ್ಯದರ್ಶಿ ಅಬಿದ್ ಆಲಿ ಕೋಶಾಧಿಕಾರಿ ಪ್ರೇಮ್ ಮಿನೇಜಸ್ ಮತ್ತು ನಿರ್ದೇಶಕರು ,ಸರ್ವ ಸದಸ್ಯರು ಪ್ರೀತಿಯಿಂದ ಪತ್ರಿಕಾ ಪ್ರಕಟಣೆ ಮೂಲಕ ಆಮಂತ್ರಿಸುತ್ತಿದ್ದಾರೆ.