ಉಡುಪಿ: ದಿನಾಂಕ: 06-08-2024(ಹಾಯ್ ಉಡುಪಿ ನ್ಯೂಸ್)
ಉಡುಪಿ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಸೇವಾ ನಿರತರಾಗಿರುವ ನೂರಕ್ಕೂ ಹೆಚ್ಚಿನ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಕಳೆದ ಮೂರು ತಿಂಗಳುಗಳಿಂದ ವೇತನವಾಗಿಲ್ಲ ಎನ್ನಲಾಗಿದೆ.
ಮಳೆಗಾಲದಲ್ಲಿ ಕೈಯಲ್ಲಿ ಸಂಬಳ ಸಿಗದೆ ನೌಕರರು ಎಲ್ಲರ ಬಳಿ ಸಾಲ ಕೇಳುತ್ತಾ ಬದುಕುತ್ತಿರುವ ಶೋಚನೀಯ ಸ್ಥಿತಿ ಇಲ್ಲಿನ ನೌಕರದ್ದಾಗಿದೆ. ಈ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಸರ್ಜನ್ ರನ್ನು ಕೇಳಿ ಕೊಂಡರೆ ಅವರು ಉಡಾಫೆಯ ವರ್ತನೆ ತೋರುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲಾ ಸರ್ಜನ್ ರು ತಮ್ಮ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬಡ ಕಾರ್ಮಿಕರ ಸಂಕಷ್ಟವನ್ನು ಅರಿತುಕೊಂಡು ಮಾನವೀಯತೆ ಮೆರೆಯಬೇಕಾಗಿದೆ.
ಮಾನ್ಯ ಆರೋಗ್ಯ ಮಂತ್ರಿ ಗಳು,ಶಾಸಕರು, ಜಿಲ್ಲಾಧಿಕಾರಿಗಳು ಈ ಬಗ್ಗೆ ಕೂಡಲೇ ಗಮನಹರಿಸಬೇಕು ಹಾಗೂ ಜಿಲ್ಲಾ ಆಸ್ಪತ್ರೆಯ ನೌಕರರಿಗೆ ಗುತ್ತಿಗೆದಾರರು ಬಾಕಿ ವೇತನವನ್ನು ಕೂಡಲೇ ಪಾವತಿಸುವಂತೆ ಕ್ರಮ ಕೈಗೊಳ್ಳಬೇಕಾಗಿದೆ.