ಬ್ರಹ್ಮಾವರ: ದಿನಾಂಕ: 05.08.2024 (ಹಾಯ್ ಉಡುಪಿ ನ್ಯೂಸ್) ಕೊಕ್ಕರ್ಣೆ ಮಾರ್ಕೆಟ್ ಪರಿಸರದಲ್ಲಿ ಮಟ್ಕಾ ಜುಗಾರಿ ಬರೆಯುತ್ತಿದ್ದ ವ್ಯಕ್ತಿಯನ್ನು ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಮಧು ಬಿ ಇ ಅವರು ಬಂಧಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಧು ಬಿ ಇ ಅವರು ದಿನಾಂಕ 03-08-2024 ರಂದು ಸಿಬ್ಬಂದಿಯವರ ಜೊತೆ ಬೆಳಿಗ್ಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬ್ರಹ್ಮಾವರ ತಾಲೂಕು ಪೆಜಮಂಗೂರು ಗ್ರಾಮದ ಕೊಕ್ಕರ್ಣೆ ಮಾರ್ಕೆಟ್ ಹತ್ತಿರ ದಿಗ್ವಿಜಯ ಹೂವಿನ ಅಂಗಡಿಯ ಎದುರು ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ಕೃಷ್ಣ ಎಂಬವನು 3- 4 ಮಂದಿ ಸಾರ್ವಜನಿಕರನ್ನು ಸೇರಿಸಿಕೊಂಡು ಮಟ್ಕಾ ಜುಗಾರಿ ಆಡುತ್ತಿದ್ದ ಎನ್ನಲಾಗಿದೆ .
ಆತನನ್ನು ಪೊಲೀಸರು ಹಿಡಿದು ವಿಚಾರಿಸಿದಾಗ ಮಟ್ಕಾ ಜುಗಾರಿಯಿಂದ ಬಂದ ಹಣವನ್ನು ನನ್ನ ಸ್ವಂತ ಲಾಭಕ್ಕಾಗಿ ಉಪಯೋಗಿಸುವುದಾಗಿ ಒಪ್ಪಿಕೊಂಡಿರುತ್ತಾನೆ ಎನ್ನಲಾಗಿದೆ.ಆತನನ್ನು ಬಂಧಿಸಿ ವಶಕ್ಕೆ ಪಡೆದು ಆತನ ಹತ್ತಿರ ಇದ್ದ ನಗದು ಹಣ ರೂ 700/-, ಮಟ್ಕಾ ಚೀಟಿ-1 ಮತ್ತು ಬಾಲ್‌ಪೆನ್-1 ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 78 KP ACT ರಂತೆ ಪ್ರಕರಣ ದಾಖಲಾಗಿದೆ.