ಕುಂದಾಪುರ: ದಿನಾಂಕ 31/07/2024 (ಹಾಯ್ ಉಡುಪಿ ನ್ಯೂಸ್) ಕಾವ್ರಾಡಿ ಗ್ರಾಮದ ಹಾಡಿ ಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಪಡುವಾಲ್ತಾರು ಹಿ.ಪ್ರಾಥಮಿಕ ಶಾಲೆಯ ಸಮೀಪ ಸರಕಾರಿ ಗೇರು ಹಾಡಿಯ ಬಳಿ ಮಧ್ಯದ ಪ್ಯಾಕೇಟುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ ಎಂಬುವುದಾಗಿ ಬಂದ ಸಾರ್ವಜನಿಕ ಮಾಹಿತಿಯಂತೆ ಕುಂದಾಪುರ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ವಸಂತ (55) ಎಂಬಾತನನ್ನು ಬಂಧಿಸಿ ಆತನ ವಶದಲ್ಲಿದ್ದ ಸ್ಥಳದಲ್ಲಿದ್ದ ಸ್ವತ್ತುಗಳನ್ನು ಪರಿಶೀಲಿಸಿದಾಗ ಮದ್ಯ ತುಂಬಿದ ಟೆಟ್ರಾ ಪ್ಯಾಕೇಟ್ ಗಳು- 77 ಕಂಡು ಬಂದಿರುತ್ತದೆ ಎನ್ನಲಾಗಿದೆ .
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 32, 34 K E Act ರಂತೆ ಪ್ರಕರಣ ದಾಖಲಾಗಿದೆ.