- ಕೋಟ: ದಿನಾಂಕ:28-07-2024(ಹಾಯ್ ಉಡುಪಿ ನ್ಯೂಸ್) ಮಣೂರು ಗ್ರಾಮದ ನಿವಾಸಿ ಮಹಿಳೆ ಯೋರ್ವರ ಮನೆಗೆ ಕಾರುಗಳಲ್ಲಿ ಬಂದ ಅಪರಿಚಿತರು ಮನೆ ಬಾಗಿಲಿಗೆ ಹಾನಿ ಮಾಡಿ ಹೋಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- ಬ್ರಹ್ಮಾವರ,ಮಣೂರು ಗ್ರಾಮದ ನಿವಾಸಿ ಕವಿತಾ (34) ಎಂಬವರಿಗೆ ದಿನಾಂಕ 25/07/2024 ರಂದು ಬೆಳಿಗ್ಗೆ 08:30 ಗಂಟೆಗೆ ಅವರ ಮನೆಯ ಹೊರಗಿನಿಂದ ಯಾರೋ ಬಾಗಿಲನ್ನು ಬಡಿದ ಶಬ್ದ ಕೇಳಿಸಿದ್ದು 09:00 ಗಂಟೆಗೆ ಕವಿತಾರವರು ಹೊರಗೆ ಬಂದು ನೋಡಿದಾಗ ಯಾರು ಇರಲಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಆ ಸಮಯ ಕವಿತಾರವರ ಮನೆಯ ಸಿಸಿ ಟಿವಿ ಪರಶೀಲನೆ ಮಾಡುವ Sign in Security ಕೃಷ್ಣ ಎಂಬುವವರು ಕವಿತಾರವರಿಗೆ ಕರೆ ಮಾಡಿ ನಿಮ್ಮ ಮನೆಗೆ ಬೆಳಿಗ್ಗೆ 08:30 ಗಂಟೆಗೆ ನಂಬ್ರ DLC5S2939 ನೇ ಹಾಗೂ ನಂಬ್ರ KA03NH4391 ನೇ ಶಿಫ್ಟ್ ಮತ್ತು ಇನೋವಾ ಕಾರಿನಲ್ಲಿ ಸುಮಾರು 6-8 ಜನ ಅಪರಿಚಿತರು ನಿಮ್ಮ ಮನೆಯ ಗೇಟನ್ನು ಹಾರಿ ನಿಮ್ಮ ಮನೆಗೆ ಬಂದು ಮನೆಯ ಮುಖ್ಯದ್ವಾರದ ಬಾಗಿಲು ಹಾಗೂ ಕಿಟಕಿಯನ್ನು ಬಲಾತ್ಕಾರವಾಗಿ ತೆಗೆಯಲು ಪ್ರಯತ್ನಿಸಿರುವುದಾಗಿ ತಿಳಿಸಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ನಂಬ್ರ DLC5S2939 ನೇ ಹಾಗೂ ನಂಬ್ರ KA03NH4391 ನೇ ಶಿಫ್ಟ್ ಮತ್ತು ಇನೋವಾ ಕಾರಿನಲ್ಲಿ ಬಂದ ಸುಮಾರು 6-8 ಜನ ಅಪರಿಚಿತರು ಕವಿತಾರವರ ಮನೆಗೆ ಅಕ್ರಮ ಪ್ರವೇಶ ಮಾಡಿ, ಮನೆಯಬಾಗಿಲು ತೆರೆಯಲು ವಿಫಲ ಯತ್ನ ಮಾಡಿ ಗೇಟನ್ನು ಹಾನಿಗೊಳಿಸಿ ಅವರು ಬಂದ ಕಾರಿನಲ್ಲಿ ವಾಪಾಸ್ಸು ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 329(4), 324 (2) RW 190 BNS ರಂತೆ ಪ್ರಕರಣ ದಾಖಲಾಗಿದೆ.