ಉಡುಪಿ: ದಿನಾಂಕ:20-07-2024 (ಹಾಯ್ ಉಡುಪಿ ನ್ಯೂಸ್) ಹಿರಿಯಡ್ಕ ನಿವಾಸಿ ವಿವಾಹಿತ ಮಹಿಳೆಯೋರ್ವರಿಗೆ ಗಂಡ ದೈಹಿಕ ಮತ್ತು ಮಾನಸಿಕ ಹಲ್ಲೆ ನಡೆಸಿ ಮನೆಗೆ ಬರಬಾರದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ,ಬೊಮ್ಮರಬೆಟ್ಟು ಗ್ರಾಮದ ನಿವಾಸಿ ಪ್ರಶಾಂತಿ (32) ಎಂಬವರನ್ನು ದಿನಾಂಕ: 16-10-2023 ರಂದು ಆಪಾದಿತ ಮಂಜುನಾಥ ಎಂಬವ ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಗುರುಹಿರಿಯರ ಸಮಕ್ಷಮದಲ್ಲಿ ಮದುವೆಯಾಗಿದ್ದಾನೆಂದು ಪ್ರಶಾಂತಿಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಶಾಂತಿ ಯವರಿಗೆ ಹಾಗೂ ಗಂಡನಾದ ಆಪಾದಿತ ಮಂಜುನಾಥ ನಿಗೆ ಈ ಹಿಂದೆ ಬೇರೆ ಮದುವೆ ಆಗಿದ್ದು, ಇಬ್ಬರು ವಿಚ್ಛೇದನ ಪಡೆದುಕೊಂಡಿರುತ್ತಾರೆ ಎಂದಿದ್ದಾರೆ.
ಮದುವೆಯ ದಿನವೇ ಮಂಜುನಾಥನು ಪ್ರಶಾಂತಿಯವರು ಮದುಮಗಳಂತೆ ರೆಡಿಯಾಗಿರುವುದನ್ನು ನೋಡಿ ಕೋಪಗೊಂಡು ಪ್ರಶಾಂತಿಯವರಿಗೆ ಬೈದು ಹೊಡೆಯಲು ಬಂದಿದ್ದಾನೆ ಎಂದಿದ್ದಾರೆ. ಇದನ್ನು ಪ್ರಶ್ನಿಸಿದ ಪ್ರಶಾಂತಿಯವರ ತಂದೆ ಹಾಗೂ ತಮ್ಮನಿಗೆ ಕೂಡ ಬೈದು ಹೊಡೆಯಲು ಹೋಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಂತರ ಮದುವೆ ಆಗಿ ಮನೆಗೆ ಹೋದ ದಿನವೇ ರಾತ್ರಿ ಇದೇ ವಿಚಾರದಲ್ಲಿ ಆಪಾದಿತ ಪುನಃ ಪ್ರಶಾಂತಿಯವರೊಂದಿಗೆ ರಾತ್ರಿ ಇಡಿ ಜಗಳ ಮಾಡಿರುತ್ತಾನೆ ಎನ್ನಲಾಗಿದೆ .
ದಿನಾಂಕ 05/02/2024 ರಂದು ರಾತ್ರಿ 12:00 ಗಂಟೆಗೆ ಆಪಾದಿತ ಮಂಜುನಾಥ ತನ್ನ ವಂಡಾರು ಮನೆಯಲ್ಲಿ ಪ್ರಶಾಂತಿಯವರಿಗೆ ಕೈಯಿಂದ ಕೆನ್ನೆಗೆ ಬೆನ್ನಿಗೆ ಹೊಡೆದಿದ್ದು, ದಿನಾಂಕ : 06/02/2024 ರಂದು ಪ್ರಶಾಂತಿಯವರನ್ನು ತಾಯಿ ಮನೆಗೆ ಬಿಟ್ಟು ಹೋಗಿರುತ್ತಾನೆ ಎಂದು ದೂರಿದ್ದಾರೆ ಹಾಗೂ ಪ್ರಶಾಂತಿಯವರು ವಾಪಾಸು ಮನೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಗಂಡ ಮಂಜುನಾಥ ನೀಡಿದ ಕಿರುಕುಳದ ಬಗ್ಗೆ ಪ್ರಶಾಂತಿಯವರು ಮಹಿಳಾ ಪೊಲೀಸ್ ಠಾಣೆ ಹಾಗೂ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ, ದಿನಾಂಕ 13/07/2024 ರಂದು ಹಿರಿಯಡ್ಕ ಠಾಣೆಯ ಪೊಲೀಸರು ದೂರಿನ ವಿಚಾರಣೆಯ ಬಗ್ಗೆ ಪ್ರಶಾಂತಿಯವರೊಂದಿಗೆ ಆಪಾದಿತ ಮಂಜುನಾಥ ಕೆಲಸ ಮಾಡುವ ಬ್ರಹ್ಮಾವರದ ಅಂಗಡಿ ಬಳಿ ಹೋದಾಗ ಆಪಾದಿತ ಮಂಜುನಾಥ ಪ್ರಶಾಂತಿಯವರ ಕೈಯನ್ನು ಗಟ್ಟಿಯಾಗಿ ತಿಪ್ಪಿ ನೋವುಂಟು ಮಾಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 85, 115(2), 351(2) BNS ರಂತೆ ಪ್ರಕರಣ ದಾಖಲಾಗಿದೆ.