ಉಡುಪಿ : ದಿನಾಂಕ :18-07-2024(ಹಾಯ್ ಉಡುಪಿ ನ್ಯೂಸ್)
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ರಾಜ್ಯಾದ್ಯಂತ ಜುಲೈ 1ರಂದು ಡಾ.ಸರೋಜನಿ ಮಹಿಷಿ ವರದಿ ಅನುಗುಣವಾಗಿ “ಉದ್ಯೋಗದಲ್ಲಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ” ಎನ್ನುವ ಹಾಗೆ ಮೀಸಲಾತಿ ಆಗ್ರಹಿಸಿ ಹೋರಾಟದ ಪ್ರತಿಫಲವಾಗಿ ಕರ್ನಾಟಕದಲ್ಲಿ ಖಾಸಗಿ ಒಡೆತನದ ಕಂಪನಿಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ‘ಸಿ ಮತ್ತು ಡಿ’ ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕಾತಿಯನ್ನು ಕಡ್ಡಾಯಗೊಳಿಸುವ ವಿಧೇಯಕಕ್ಕೆ ಸಚಿವ ಸಂಪುಟದಲ್ಲಿ ಅನುಮತಿ ನೀಡಿದೆ.
ಇದೊಂದು ಐತಿಹಾಸಿಕ ಕಾಯ್ದೆ. ಈ ಕಾಯ್ದೆ ಮಾಡಲು ಮುಂದೆ ಬಂದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಸಚಿವ ಸಂಪುಟ ಸಚಿವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಸಮಿತಿಯ ಪರವಾಗಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಅಭಿನಂದನೆ ಸಲ್ಲಿಸಿದ್ದಾರೆ. ಇದೊಂದು ಐತಿಹಾಸಿಕ ತೀರ್ಮಾನವಾಗಿ ಈ ಕಾಯ್ದೆಯಿಂದ ಕನ್ನಡಿಗರ ಹಿತವನ್ನು ಕಾಪಾಡಿದಂತಾಗಿದೆ. ನಮ್ಮ ರಾಜ್ಯದ ಜನರು ಉದ್ಯೋಗಕ್ಕೆ ಬೇರೆ ರಾಜ್ಯಕ್ಕೆ ವಲಸೆ ಹೋಗುತ್ತಿದ್ದರು , ಹೀಗಾಗಿ ಕನ್ನಡಿಗರಿಗೆ ಇದೊಂದು ಮಹತ್ವದ ತೀರ್ಮಾನವಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.