ಶಿರ್ವಾ: ದಿನಾಂಕ: 17-07-2024(ಹಾಯ್ ಉಡುಪಿ ನ್ಯೂಸ್) ಪಡುಬೆಳ್ಳೆ ಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ವರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 16/07/2024 ರಂದು ಶಿರ್ವ ಪೊಲೀಸ್ ಠಾಣೆಗೆ ಬಾತ್ಮೀದಾರರಿಂದ ಬಂದ ಮಾಹಿತಿಯಂತೆ ಬೆಳ್ಳೆ ಗ್ರಾಮದ ಪಡುಬೆಳ್ಳೆ ಮಡಿವಾಳಕೆರೆಗೆ ಹೋಗುವ ದಾರಿಯಲ್ಲಿನ ರಮೇಶ್‌ಎಂಬವರ ಕುರಿಶೆಡ್‌ಬಳಿ ಸಾರ್ವಜನಿಕ ಸ್ಥಳದಲ್ಲಿ 5-6 ಜನರು ಹಣವನ್ನು ಲಾಭಕ್ಕಾಗಿ ಪಣವಾಗಿಟ್ಟುಕೊಂಡು ಕಾನೂನು ಬಾಹಿರವಾಗಿ ಅಂದರ್ ಬಾಹರ್‌ಎಂಬ ಇಸ್ಪೀಟ್‌ಜುಗಾರಿ ಆಟ ಆಡುತ್ತಿದ್ದಾರೆಂದು ಮಾಹಿತಿ ನೀಡಿದ್ದು ಈ ಮಾಹಿತಿ ಬಂದ ಕೂಡಲೇ ಶಿರ್ವ ಪೊಲೀಸ್ ಠಾಣೆ ಠಾಣಾಧಿಕಾರಿಯವರು ಸಿಬ್ಬಂದಿ ಯವರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 64/2024 ಕಲಂ 87 K.P ACT ರಂತೆ ಪ್ರಕರಣ ದಾಖಲಾಗಿದೆ.