ಉಡುಪಿ: ದಿನಾಂಕ:15-07-2024 (ಹಾಯ್ ಉಡುಪಿ ನ್ಯೂಸ್) ಉಡುಪಿಯ ಅಂಬಲಪಾಡಿ ಬೈಪಾಸ್ ಬಳಿಯ ಶೆಟ್ಟಿ ಬಾರ್ ಮಾಲೀಕರ ಮನೆಯಲ್ಲಿ ಇಂದು ಮುಂಜಾನೆ ನಡೆದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ವ್ಯಾಪಿಸಿ ಬೆಂಕಿಯಲ್ಲಿ ಮಕ್ಕಳನ್ನು ರಕ್ಷಿಸಲು ಹೋದ ಬಾರ್ ಮಾಲೀಕರಾದ ರಮಾನಂದ ಶೆಟ್ಟಿಯವರು ಬೆಂಕಿಯಲ್ಲಿ ಬೆಂದು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಪತ್ನಿ ಯ ಸ್ಥಿತಿ ಗಂಭೀರ ವಾಗಿದೆ ಎನ್ನಲಾಗಿದೆ.