ಉಡುಪಿ: ದಿನಾಂಕ: 13-07-2024 (ಹಾಯ್ ಉಡುಪಿ ನ್ಯೂಸ್) ಸ್ಟಾಕ್ ಮಾರ್ಕೆಟ್ ನಲ್ಲಿ ಹೆಚ್ಚಿನ ಹಣ ಪಡೆಯಬಹುದೆಂದು ನಂಬಿಸಿ ವ್ಯಕ್ತಿ ಯೋರ್ವರಿಗೆ ಒಂದು ಲಕ್ಷ ರೂಪಾಯಿ ವಂಚನೆ ಮಾಡಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿ ಬೈಲಕೆರೆ, ನಿವಾಸಿ ಕೆ.ಗುರುಪ್ರಸಾದ್ ಎಂಬವರಿಗೆ ಅಪರಿಚಿತ ವ್ಯಕ್ತಿ ಯೋರ್ವನು ವಾಟ್ಸಪ್ ನಂಬ್ರ ದಿಂದ GSAM ಸ್ಟಾಕ್ ಮಾರ್ಕೆಟ್ ಕಂಪನಿಯಲ್ಲಿ ಕಡಿಮೆ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಹಣವನ್ನು ಪಡೆಯಬಹುದು ಎಂದು ನಂಬಿಸಿ ಗುರುಪ್ರಸಾದ್ ರವರ ಖಾತೆಯಿಂದ ದಿನಾಂಕ:26/06/2024 ರಂದು IMPS ಮುಖಾಂತರ 50,000/- ರೂಪಾಯಿಗಳನ್ನು ,ದಿನಾಂಕ:27/06/2024 ರಂದು 20,000/- ರೂಪಾಯಿಗಳನ್ನು ಹಾಗೂ ದಿನಾಂಕ: 02/07/2024 ರಂದು 30,000/- ರೂಪಾಯಿಗಳನ್ನು.ಒಟ್ಟಾರೆಯಾಗಿ 1,00,000/-ರೂಪಾಯಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದು, ಗುರುಪ್ರಸಾದ್ ರವರಿಗೆ ಹಣವನ್ನು ಹಿಂತಿರುಗಿಸದೇ ಯಾರೋ ಅಪರಿಚಿತ ಆರೋಪಿ ವ್ಯಕ್ತಿ ಯು ವಂಚನೆ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 318(4)BNS, 66 (D) IT Act ನಂತೆ ಪ್ರಕರಣ ದಾಖಲಾಗಿದೆ.