Spread the love

ಅಮಾಸೆಬೈಲು: ದಿನಾಂಕ :11/07/2024 (ಹಾಯ್ ಉಡುಪಿ ನ್ಯೂಸ್) ಬೊಬ್ಬರ್ಯನ ಜಡ್ಡು ಎಂಬಲ್ಲಿನ ಸಾರ್ವಜನಿಕ ಹಾಡಿಯಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಹದಿನೈದು ಜನರನ್ನು ಅಮಾಸೆಬೈಲು ಪೊಲೀಸ್‌ ಠಾಣೆಯ  ಪೊಲೀಸ್‌ ಉಪನಿರೀಕ್ಷಕರಾದ (ಪ್ರಭಾರ), ಮಹಾಂತೇಶ್ ಜಾಬ ಗೌಡ ಅವರು ಬಂಧಿಸಿದ್ದಾರೆ.

ಅಮಾಸೆಬೈಲು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ಪ್ರಭಾರ) ಮಹಾಂತೇಶ್ ಜಾಬ ಗೌಡ ಅವರು ದಿನಾಂಕ :09-07-2024 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಚ್ಚಟ್ಟು ಗ್ರಾಮದ ಬೊಬ್ಬರ್ಯನಜಡ್ಡು ಎಂಬಲ್ಲಿ ಸಾರ್ವಜನಿಕ ಹಾಡಿಯಲ್ಲಿ ಹಲವು ಜನರು ಸೇರಿಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿ ಜುಗಾರಿ ಆಡುತ್ತಿದ್ದ ಆರೋಪಿಗಳಾದ 1) ಸುರೇಂದ್ರ, 2) ಸುರೇಂದ್ರ ಯಾನೆ ಸೂಲ್ಯ, 3) ಸಂತೋಷ್, 4)ಗಣೇಶ , 5) ಸುಧಾಕರ, 6) ದಿನೇಶ, 7) ಗಣೇಶ, 8) ಸುಧಾಕರ, 9) ರಾಘವೇಂದ್ರ, 10) ಸಂತೋಷ , 11) ಲೋಕು , 12) ವಿಜಯ, 13) ಗಣೇಶ , 14) ಪ್ರಶಾಂತ , 15) ಸಂತೋಷ್ ಎಂಬವರನ್ನು ಬಂಧಿಸಿದ್ದಾರೆ.

ಆರೋಪಿಗಳು ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ ನಗದು ರೂಪಾಯಿ 7,200 /̧- ಇಸ್ಪೀಟು ಎಲೆಗಳು, ಟರ್ಪಾಲು, ಬೆಡ್ ಶೀಟ್, ಟರ್ಪಾಲು ಕಟ್ಟಲು ಬಳಸಿದ ನೈಲಾನ್ ಹಗ್ಗ ಸ್ವಾಧೀನಪಡಿಸಿಕೊಂಡಿದ್ದಾರೆ .

ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಕಲಂ: 87 K P Act ರಂತೆ ಪ್ರಕರಣ ದಾಖಲಾಗಿದೆ.

error: No Copying!