Spread the love

ಮಣಿಪಾಲ: ದಿನಾಂಕ: 10-07-2024(ಹಾಯ್ ಉಡುಪಿ ನ್ಯೂಸ್) ಉದ್ಯಾವರದ ಯುವಕನೋರ್ವ ನನ್ನು ಕಿಡ್ನಾಪ್ ಮಾಡಿದ ತಂಡವೊಂದು ಮಣಿಪಾಲದಲ್ಲಿ ಗಾಂಜಾ ಮಾರಾಟ ಮಾಡಲು ಹಫ್ತಾ ನೀಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವ ಬಗ್ಗೆ  ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಉದ್ಯಾವರ ,ಸಂಪಿಗೆ ನಗರ ,ಕಂಪನ ಬೆಟ್ಟು ನಿವಾಸಿ ಮುಹಮ್ಮದ್ ಪರ್ವೇಜ್ (25) ಎಂಬವರು  ದಿನಾಂಕ: 09.07.2024 ರಂದು ರಾತ್ರಿ  ಮನೆಯಲ್ಲಿರುವಾಗ ಅವರ ಪರಿಚಯದ ಫೈಝಿ ಯಾನೆ ಫೈಝಲ್‌  ಎಂಬವನು ಪೋನ್‌ ಕರೆ ಮಾಡಿ ನಿನ್ನ ಬಳಿ ಅಗತ್ಯ ಮಾತನಾಡಲು ಇದೆ ಕೂಡಲೇ ಮಣಿಪಾಲಕ್ಕೆ ಬಾ ಎಂದು ಹೇಳಿ ಕರೆದಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಫೈಝಲ್ ಕರೆದಂತೆ ಮಹಮ್ಮದ್ ಪರ್ವೇಜ್ ಅವರು ರಾತ್ರಿ 10:00 ಗಂಟೆಗೆ ಮಣಿಪಾಲಕ್ಕೆ ಹೋಗಿದ್ದು ಆಗ ಫೈಝಲ್‌ನು ಪೋನ್‌ ಕರೆ ಮಾಡಿ ಮಣಿಪಾಲದ MS Mart ಬಳಿ ಬರುವಂತೆ ತಿಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಹಮ್ಮದ್ ಪರ್ವೇಜ್ ಅವರು MS Mart ಬಳಿ ಹೋದಾಗ ಫೈಝಲ್‌ ಅಲ್ಲಿಗೆ ಬಂದು ಮಹಮ್ಮದ್ ಪರ್ವೇಜ್ ಅವರನ್ನು ಅಲ್ಲಿಂದ ಸುಮಾರು ರಾತ್ರಿ 10:15 ಗಂಟೆಗೆ ಕೀರ್ತೀ ಸಾಗರ್‌ ಅಪಾರ್ಟಮೆಂಟ್‌ ಬಳಿ ಕರೆದುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆಗ ಅಲ್ಲಿಗೇ ಒಂದು Swift Car ಬಂದಿದ್ದು ಅದರಲ್ಲಿ ಮಹಮ್ಮದ್ ಪರ್ವೇಜ್ ಅವರ ಪರಿಚಯದ  ದಾವೂದ್‌ ಇಬ್ರಾಹಿಂ ಮತ್ತು ಇಸಾಕ್‌ ಯಾನೆ ಇಚ್ಚು ಎಂಬವರು ಇದ್ದು ಅವರು ಕಾರಿನಿಂದ ಇಳಿದು ಮಹಮ್ಮದ್ ಪರ್ವೇಜ್ ಅವರ ಬಳಿ ಬಂದು ಫೈಝು ಯಾನೇ ಫೈಝಲ್‌, ದಾವೂದ್‌ ಇಬ್ರಾಹಿಂ ಮತ್ತು ಇಸಾಕ್‌ ಈ ಮೂವರು ಸೇರಿ ಮಹಮ್ಮದ್ ಪರ್ವೇಜ್ ಅವರನ್ನು  ಬಲಾತ್ಕಾರವಾಗಿ ಕಾರಿನ ಹಿಂಬದಿ ಸೀಟಿನ ಕೆಳಗಡೆ ಏಳೆದು ಹಾಕಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕಾರನ್ನು ಇಸಾಕ್‌ ಎಂಬವ ಚಾಲನೆ ಮಾಡುತ್ತಿದ್ದು, ಮಹಮ್ಮದ್ ಪರ್ವೇಜ್ ಅವರು  ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದು ಕೇಳಿದಾಗ ಫೈಝಲ್‌ನು ಮಹಮ್ಮದ್ ಪರ್ವೇಜ್ ರಿಗೆ ಅವಾಚ್ಯ ಶಬ್ದದಿಂದ ಬೈದು ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯ ಎಂದು ನಮಗೆ ಮಾಹಿತಿ ಇದೆ, ಮಣಿಪಾಲದಲ್ಲಿ ನೀನು ಗಾಂಜಾ ಮಾರಾಟ ಮಾಡಿದರೆ ನಮಗೆ ತಿಂಗಳ ಮಾಮೂಲಿ ಹಣ ಕೊಡಬೇಕು ,ಇದಕ್ಕೆ ಒಪ್ಪದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳುತ್ತಾ ಕಾರನ್ನು ಚಲಾಯಿಸಿಕೊಂಡು ಯಾವುದೋ ಒಂದು ಊರಿಗೆ ಚಲಾಯಿಸಿಕೊಂಡು ಹೋಗಿ ಕಾರನ್ನು ನಿಲ್ಲಿಸಿ ಮಹಮ್ಮದ್ ಪರ್ವೇಜ್ ರಿಗೆ “ನೀನು ನಮಗೆ ಗಾಂಜಾ ಮಾರಾಟದ ಹಪ್ತ ಕೊಡುವುದಿಲ್ಲವಾ ?ನಿನ್ನನ್ನು ಜೀವಂತ ಬಿಡುವುದಿಲ್ಲ ಎಂದು ಹೇಳಿ  ದಾವೂದ್‌ ಇಬ್ರಾಹಿಂ ಎಂಬವನು ಒಂದು ಮರದ ದೊಣ್ಣೆಯಿಂದ ಕಾಲಿಗೆ, ಕೈಗೆ, ಬೆನ್ನಿಗೆ ಹೊಡೆದಿದ್ದು, ಅದೇ ಕೋಲಿನಿಂದ ಇಸಾಕ್‌ ಎಂಬವನು ಮಹಮ್ಮದ್ ಪರ್ವೇಜ್  ರ ಬೆನ್ನಿಗೆ ಮತ್ತು ಕಾಲಿಗೆ ಹೊಡೆದಿದ್ದು, ಫೈಝಲ್‌ ಎಂಬವನು ಕೈಯಿಂದ  ಕೆನ್ನೆಗೆ, ಬೆನ್ನಿಗೆ ಹೊಡೆದು ಕಾಲಿನಿಂದ  ತುಳಿದಿದ್ದು ಮಹಮ್ಮದ್ ಪರ್ವೇಜ್ ರು ಬೊಬ್ಬೆ ಹಾಕುತ್ತಾ ನನ್ನನ್ನು ಬಿಡಿ ನೀವು ಹೇಳಿದ ಹಾಗೇ  ಕೇಳುತ್ತೇನೆ ಎಂದು ಹೇಳಿದ ಬಳಿಕ ಮೂವರೂ ಮಹಮ್ಮದ್ ಪರ್ವೇಜ್ ರನ್ನು ಕಾರಿನಲ್ಲಿ  ಹಾಕಿ ಬೆಳಿಗಿನ ಜಾವ ವಾಪಾಸ್ಸು ಅವರ ಮನೆ ಬಳಿ ತಂದು ಬಿಟ್ಟು ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ವಿಚಾರದ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿದ್ದಾರೆ. ಹಲ್ಲೆಯಿಂದ ಮಹಮ್ಮದ್ ಪರ್ವೇಜ್ ರವರ ಮೈ ಕೈಗೆ ವಿಪರೀತ ನೋವು ಉಂಟಾಗಿದ್ದು ಚಿಕಿತ್ಸೆಯ ಬಗ್ಗೆ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ .

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕಲಂ: 140(1), 115(2),109, 352, 351(2)(3) ಜೊತೆ 3(5) BNS  ರಂತೆ ಪ್ರಕರಣ ದಾಖಲಾಗಿದೆ.

error: No Copying!