Spread the love

ಉಡುಪಿ: ದಿನಾಂಕ :09-07-2024 (ಹಾಯ್ ಉಡುಪಿ ನ್ಯೂಸ್) ನಗರದಲ್ಲಿ ಗಾಂಜಾ ಸೇವನೆ ಮಾಡಿದ್ದ ಯುವಕನೋರ್ವನನ್ನು ಉಡುಪಿ ನಗರ ಪೊಲೀಸ್‌ ಠಾಣೆ ಪಿಎಸ್ಐ ಯವರಾದ ಪುನೀತ್ ಕುಮಾರ್ ಬಿ ಈ ಅವರು ಬಂಧಿಸಿದ್ದಾರೆ.

ದಿನಾಂಕ : 06/07/2024 ರಂದು ಉಡುಪಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಪುನೀತ್ ಕುಮಾರ್ ಬಿ ಈ ಅವರು ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಮಹಮ್ಮದ್‌ ನೌಫಿಲ್‌ ಎಂಬಾತನನ್ನು ಠಾಣೆಯಲ್ಲಿ ವಿಚಾರಣೆ ಮಾಡುತ್ತಿರುವಾಗ ಆತ ಮಾದಕ ದ್ರವ್ಯ ಸೇವನೆ ಮಾಡಿ ಅಮಲಿನಲ್ಲಿರುವುದು ಕಂಡು ಬಂದಿದೆ ಎನ್ನಲಾಗಿದೆ.

ಆಪಾದಿತ ಮಹಮ್ಮದ್ ನೌಫಿಲ್ ನನ್ನು ವಶಕ್ಕೆ ಪಡೆದು, ಮಣಿಪಾಲ, ಕೆಎಂಸಿ, ಫಾರೆನ್ಸಿಕ್‌  ಮೆಡಿಸಿನ್‌  ವಿಭಾಗದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ತಜ್ಞರು ನೀಡಿದ ವರದಿಯಲ್ಲಿ ಆಪಾದಿತನು ನಿಷೇಧಿತ ಗಾಂಜಾ (Marijuana) ಎಂಬ ಮಾದಕ ವಸ್ತುವನ್ನು ಸೇವಿಸಿರುವುದು  ದೃಢಪಟ್ಟಿದೆ ಎನ್ನಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 27(ಬಿ) ಎನ್‌ಡಿಪಿಎಸ್‌ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

error: No Copying!