Spread the love

ಕಾರ್ಕಳ: ದಿನಾಂಕ:06-07-2024 (ಹಾಯ್ ಉಡುಪಿ ನ್ಯೂಸ್) ಬೋಳ ಗ್ರಾಮದ ರೈಸ್ ಮಿಲ್ ಒಂದರ ಶೆಡ್ ನಲ್ಲಿ ನಡೆಯುತ್ತಿದ್ದ ಅಂದರ್ ಬಾಹರ್ ಜುಗಾರಿ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ

ದಿನಾಂಕ 05/07/2024 ರಂದು ಸಂಜೆ  ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕಾರ್ಕಳ ತಾಲೂಕು ಬೋಳ ಗ್ರಾಮ ಪೊಸರ್ಮೆ ಎಂಬಲ್ಲಿ ಶ್ರೀನಿವಾಸ ಎಂಬವರ ಮಾಲೀಕತ್ವದ ಹಳೆ ರೈಸ್ ಮಿಲ್ಲಿನ ಶೆಡ್‌ನಲ್ಲಿದ್ದ ಟೇಬಲ್ ಮೇಲೆ ಶ್ರೀನಿವಾಸ , ಸಂತೋಷ್ , ಶ್ರೀನಿವಾಸ, ಅಶೋಕ್, ರಾಜೇಶ್, ಕೃಷ್ಣ, ರವೀಂದ್ರ  ಹಾಗೂ ಶಿವಾನಂದ ಎಂಬವರು, ಇಸ್ಪೀಟು ಎಲೆಗಳನ್ನು ಹರಡಿಕೊಂಡು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಎಂಬ ಜುಗಾರಿ ಆಟವನ್ನು ಆಡುತ್ತಿರುವ ಬಗ್ಗೆ  ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ದಿಲೀಪ್ ಜಿ.ಆರ್ ಅವರಿಗೆ ಖಚಿತ ಮಾಹಿತಿ ಬಂದಿದೆ ಎನ್ನಲಾಗಿದೆ.

ಅವರು ಠಾಣೆಯ ಸಿಬ್ಬಂದಿಯವರೊಂದಿಗೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು ಇಸ್ಪೀಟು ಆಟಕ್ಕೆ ಬಳಸಿದ 25,720/- ನಗದು, ಒಟ್ಟು 159 ಇಸ್ಪೀಟ್ ಎಲೆಗಳು ಹಾಗೂ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ .

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ: 79, 80 ಕೆ ಪಿ ಆಕ್ಟ್ ನಂತೆ  ಪ್ರಕರಣ ದಾಖಲಾಗಿದೆ.

error: No Copying!