ಹಿರಿಯಡ್ಕ: ದಿನಾಂಕ :01-07-2024 (ಹಾಯ್ ಉಡುಪಿ ನ್ಯೂಸ್) ಉದ್ದುಬೆಟ್ಟು ಬಸ್ ನಿಲ್ದಾಣದ ಬಳಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ 6 ಜನರನ್ನು ಹಿರಿಯಡ್ಕ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಮಂಜುನಾಥ ಮರಬದ ಅವರು ಬಂಧಿಸಿದ್ದಾರೆ.
ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಂಜುನಾಥ ಮರಬದ ಅವರಿಗೆ ದಿನಾಂಕ 29/06/2024 ರಂದು ರಾತ್ರಿ ಮಾಹಿತಿದಾರರಿಂದ ಅಂಜಾರು ಗ್ರಾಮದ ಉದ್ದುಬೆಟ್ಟು ಬಸ್ ನಿಲ್ದಾಣದ ಬಳಿ ಅಂದರ್ ಬಾಹರ್ ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಠಾಣಾ ಸಿಬ್ಬಂಧಿಗಳಾದ ಕಾರ್ತಿಕ್, ಉಮೇಶ ಹಾಗೂ ಮಾರುತಿ, ಬೀಮಪ್ಪ ಹಾಗೂ ನಭೀ ರಸೂಲ್ ರೊಂದಿಗೆ ಅಂಜಾರು ಗ್ರಾಮದ ಆಳುಗ್ಗೇಲು ರಟ್ಟಿನ ಪ್ಯಾಕ್ಟರಿ ಬಳಿ ಹಣವನ್ನು ಪಣವಾಗಿಟ್ಟು ಕೊಂಡು ಅಂದರ್ ಬಾಹರ್ ಆಡುತ್ತಿರುವಲ್ಲಿಗೆ ಸಿಬ್ಬಂಧಿಗಳ ಸಹಾಯದಿಂದ ದಾಳಿ ಮಾಡಿದಾಗ 1) ಸಂತೋಷ 2) ರಮೇಶ, 3) ರಾಘವೇಂದ್ರ, 4) ಸತೀಶ, 5) ಪ್ರತಾಪ್, 6) ಸುರೇಶ ಎಂಬವರನ್ನು ವಶಕ್ಕೆ ಪಡೆದು, ಜೂಜಾಟಕ್ಕೆ ಬಳಸಿದ ಒಟ್ಟು ನಗದು ರೂಪಾಯಿ 11,210/- ಮತ್ತು 1 ಪೈಬರ್ ಟೇಬಲ್, 4 ಪ್ಲಾಸ್ಟಿಕ್ ಕುರ್ಚಿ , ಬೆಡ್‌ಶೀಟ್-1 ಮತ್ತು 52 ಇಸ್ಪೀಟ್ ಎಲೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ: 87 ಕೆ.ಪಿ. ಕಾಯ್ದೆ ಮತ್ತು 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.