ಉಡುಪಿ : ದಿನಾಂಕ :28/06/2024 (ಹಾಯ್ ಉಡುಪಿ ನ್ಯೂಸ್) ನಗರದಲ್ಲಿ ಕರ್ಕಶ ಹಾರ್ನ್ ಬಳಸಿ ಸಾರ್ವಜನಿಕರಿಗೆ ಉಪದ್ರವ ಮಾಡುತ್ತಿದ್ದ ಬಸ್ ಚಾಲಕನ ಮೇಲೆ ಉಡುಪಿ ನಗರ ಸಂಚಾರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸುದರ್ಶನ್ ದೊಡ್ಡಮನಿ ಅವರು ಕ್ರಮ ಕೈಗೊಂಡಿದ್ದಾರೆ.
ಉಡುಪಿ ಸಂಚಾರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಸುದರ್ಶನ್ ದೊಡ್ಡಮನಿ ಅವರು ದಿನಾಂಕ :26-06-2024 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಲಯನ್ಸ್ ಸರ್ಕಲ್ ಬಳಿ AKMS ಬಸ್ ನೋಂದಣಿ ನಂಬ್ರ KA-19-C-3139 ನೇ ಚಾಲಕ ಅಲ್ಬರ್ಟ್ ಕ್ಯಾಸ್ತಲಿನೋ ಎಂಬಾತನು ಬಸ್ಸಿನ ಹಾರ್ನ್ ನಿಂದ ಕರ್ಕಶವಾದ ಶಬ್ಧವನ್ನು ಹೊರ ಹೊಮ್ಮಿಸಿ ಸಾರ್ವಜನಿಕರಿಗೆ ಉಪದ್ರವವನ್ನು ಉಂಟು ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 290 ಐಪಿಸಿ ಮತ್ತು 194ಎಫ್ ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.