ಉಡುಪಿ: ದಿನಾಂಕ: 22-06-2024(ಹಾಯ್ ಉಡುಪಿ ನ್ಯೂಸ್) ಮನೆಯಲ್ಲಿ ಮಾರಕಾಸ್ತ್ರ ತಲವಾರು ಹೊಂದಿದ್ದ ಯುವಕನೋರ್ವನನ್ನು ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಪುನೀತ್ ಕುಮಾರ್ ಬಿ ಇ, ಅವರು ಬಂಧಿಸಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಪುನೀತ್ ಕುಮಾರ್ ಬಿ ಇ ಅವರಿಗೆ ಉಡುಪಿಯ ಪುತ್ತೂರು ಗ್ರಾಮದ ಚರಣ್ (18) ಎಂಬವನು ಮನೆಯಲ್ಲಿ ಮಾರಕಾಯುಧವನ್ನು ಹೊಂದಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ದಿನಾಂಕ 21/06/2024 ರಂದು ಆರೋಪಿ ಚರಣ್ ನ ಮನೆಯಲ್ಲಿ ಶೋದನೆ ನಡೆಸಿದಾಗ ಮಾರಕಾಯುಧವಾದ ತಲವಾರು ದೊರೆತಿದೆ ಎನ್ನಲಾಗಿದೆ .
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 5, 25(1)(a) Arms Act ರಂತೆ ಪ್ರಕರಣ ದಾಖಲಾಗಿದೆ.